ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವ್ಯಸನಿಗಳ ಮನೆ ಬಾಗಿಲಿಗೆ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರು ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ. ವೈಟ್ ಫೀಲ್ಡ್ನ ಪಟ್ಟಂದೂರು ಸಮೀಪದ ನಿವಾಸಿಗಳಾದ ವಿಕಾಸ್ ಮತ್ತು ಶಿವಂ ಬಂಧಿತರು. 150 ಗ್ರಾಂ ಎಂಟಿಎಎ, ಎಕೈಟೆಸಿ ಮಾತ್ರೆಗಳು 400 ಗ್ರಾಂ ಚರಸ್, 3 ಕೆಜಿ ಹ್ಯಾಶಿಶ್ ಆಯಿಲ್, 30ಕೆಜಿ ಗಾಂಜ ಸೇರಿ 2 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಇತ್ತೀಚಿನ ಸೆರೆಸಿಕ್ಕ 6 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಪ್ರಕರನ ಬೆನ್ನತ್ತಿದ್ದಾಗ ಮತ್ತೊಂದು ಗ್ಯಾಂಗ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಮೂಲದ ದೆಹಲಿಯಲ್ಲಿ ನೆಲೆಸಿರುವ ಅಕ್ಷಯ್ ಪಾಂಡೆ ಡಾರ್ಕ್ ವೆಬ್ಸೈಟ್ನ ಬಿಟ್ ಕಾಯಿನ್ ಕೊಟ್ಟು ಅಂತರಾಷ್ಟಿçÃಯ ಪೆಡ್ಲರ್ಗಳಿಂದ ಡ್ರಗ್ಸ್ ಖರೀದಿಸುತ್ತಿದ್ದ. ವಿದೇಶದಿಂದ ಕೊರಿಯರ್ನಲ್ಲಿ ದೆಹಲಿಗೆ ಡ್ರಗ್ಸ್ ತರಿಸಿಕೊಂಡು ಅಲ್ಲಿಂದ ಬೆಂಗಳೂರಿಗೆ ರೈಲಿನಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದ.
ಆನಂತರ ತನ್ನ ಸಹಚರರ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದ. ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದ ಅಕ್ಷಯ್ ಪಾಂಡೆ. ನಗರಗಳಲ್ಲಿ ಸಣ್ಣ ತಂಡಗಳನ್ನು ಮಾಡಿಸಿಕೊಂಡು ನೆಟ್ವರ್ಕ್ ಬೆಳಸಿಕೊಂಡಿದ್ದಾನೆ. ಜಾರ್ಖಂಡ್ ಮೂಲದ ವಿಕಾಸ್ ಮತ್ತು ಶಿವಂ ಅವರನ್ನು ನಗರಕ್ಕೆ ಕಳುಹಿಸಿ ವೈಟ್ಫಿಲ್ಡ್ ನಲ್ಲಿ ಡ್ರಗ್ಸ್ ಪೂರೈಕೆ ಜವಬ್ದಾರಿ ನೀಡಿದ್ದ. ಆರೋಪಿಗಳಿಗೆ ಡ್ರಗ್ಸ್ ಜತೆಗೆ ವ್ಯಸನುಗಳ ಪಟ್ಟಿಯನ್ನೂ ಕಳುಹಿಸಿದ್ದ. ಆ ಪ್ರಕಾರ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave a Comment