ಹೊನ್ನಾವರ: ಸುಶಿಕ್ಷೀತ ಸಮಾಜದ ಹೊಣೆ ಹೊತ್ತು ಶಿಕ್ಷಕ ವೃತ್ತಿಯ ಮೂಲಕ ಸಮಾಜಕ್ಕೆ ಜ್ಞಾನದೀವಿಗೆ ಊಣಬಡಿಸುತ್ತಿರುವ ತಾಲೂಕಿನ ಮೂವರು ಶಿಕ್ಷಕರು ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಪ್ರೌಡಶಾಲಾ ವಿಭಾಗದಲ್ಲಿ ತಾಲೂಕಿನ ಗೇರುಸೊಪ್ಪಾ ಪ್ರೌಡಶಾಲೆಯ ಬಿ.ಎಲ್.ನಾಯ್ಕ ಆಯ್ಕೆಯಾಗಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಧ್ಯಯನ ನಡೆಸಿದ ಶಾಲೆಯ ಗುರುವಿಗೆ ಈ ಬಾರಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಗೆ ಆಯ್ಕೆಯಾಗಿರುವುದು ಶಾಲಾ ಶಿಕ್ಷಕ ವರ್ಗಕ್ಕೆ ಇನ್ನಷ್ಟು ಸಂತಸ ಮೂಡಿದೆ.
1998ರಿಂದ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ಇವರು ಹಾವೇರಿಯ ಹಾನಗಲ್ ಶಿರಗೋಡ ಪ್ರೌಡಶಾಲೆಯಲ್ಲಿ ವೃತ್ತಿ ಆರಂಭಿಸಿ ೧೨ ವರ್ಷ ಸೇವೆ ಸಲ್ಲಿಸಿ ತಾಲೂಕಿಗೆ ವರ್ಗಾವಣೆ ಆಗಿ ಬಂದು ಗೇರುಸೊಪ್ಪಾ ಪ್ರೌಡಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಬಂಧ, ಕಥೆ, ಕವನಗಳನ್ನು ಬರೆಯುವ ಹವ್ಯಾಸ ಹೊಂದಿರುವ ಇವರು ನೆಚ್ಚಿನ ವೃತ್ತಿ ಶಿಕ್ಷಕ ವೃತ್ತಿಯ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠೈತರ ವಿಷಯದಲ್ಲಿ ಸಾಧನೆ ಮಾಡಲು ಹುರಿದುಂಬಿಸುತ್ತಿದ್ದಾರೆ. ಶಾಲಾ ಮುಖ್ಯೊಪಧ್ಯಾಯರು, ಹಾಗೂ ವೃತ್ತಿ ಬಾಧಂವರ ಸಹಕಾರವೇ ಈ ಪ್ರಶಸ್ತಿ ಬರಲು ಕಾರಣವಾಗಿದೆ.
ಬಿ.ಎಲ್.ನಾಯ್ಕ ಎಸ್.ಎಲ್.ಹೆಗಡೆ ಬಿ.ವಿ.ಫರೀದಾ
ನಾನು ಕಲಿಸಿದ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದ ಜೊತೆ ನಾಲ್ವರು ವಿದ್ಯಾರ್ಥಿಗಳು ಟಾಪ್ ಟೆನ್ ಆಗಿರುದು ಇನ್ನಷ್ಟು ಸಂತಸ ಮೂಡಿಸಿದೆ ಇಲಾಖೆಗೆ ಹಾಗೂ ವೃತ್ತಿಗೆ ಚ್ಯುತಿ ಬರದಂತೆ ಮುಂದೆಯು ಕಾರ್ಯನಿರ್ವಹಿಸುತ್ತೇನೆ ಎಂದು ಅನಿಸಿಕೆ ಹಂಚಿಕೊಂಡರು.
*ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆಯಾದ ಎಸ್.ಎಲ್.ಹೆಗಡೆ*ಇನ್ನೊರ್ವ ಶಿಕ್ಷಕರಾದ ಸತ್ಯನಾರಾಯಣ ಹೆಗಡೆ ೨೦ ವರ್ಷದಿಂದ ತಾಲೂಕಿನ ವಿವಿಧ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತ್ರಿಗೆ ಆಯ್ಕೆಯಾದವರು. 1994ರಲ್ಲಿ ಯಲ್ಲಾಪುರದ ಯಲವಳ್ಳಿಯಲ್ಲಿ ವೃತ್ತಿ ಜೀವನ ಆರಂಭಿಸಿ ೫ ವರ್ಷಗಳ ಸೇವೆ ಸಲ್ಲಿಸಿ ತಾಲೂಕಿಗೆ ವರ್ಗಾವಣೆ ಆಗಿ ಬಂದರು. ನಗರಬಸ್ತೀಕೇರಿ ಉರ್ದು ಶಾಲೆಯಲ್ಲಿ ೬ ವರ್ಷ, ಅಳ್ಳಂಕಿಯಲ್ಲಿ ೮ ವರ್ಷ ಸೇವೆ ಸಲ್ಲಿಸಿ ೨೦೧೨ರಿಂದ ಕೂಡ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಕೋಟ್ಸ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಕೌಟ್ಸ ಬಗ್ಗೆ ವಿವಿಧ ಶಾಲೆಯಲ್ಲಿ ತರಬೇತಿಯನ್ನು ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಇತರೆ ರಂಗದಲ್ಲಿಯೂ ಸಾಧನೆ ಮಾಡಬಹುದು. ಸಾಧನೆಗೆ ವಿಫಲ ಅವಕಾಶವಿದೆ ಆದರೆ ಸಾಧಿಸಲು ಛಲ ಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾ ಬಂದಿದ್ದಾರೆ.
*ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಬಿ.ವಿ.ಫರೀದಾ ಆಯ್ ಶೇಖ್ ಆಯ್ಕೆ*ಕಳೆದ ೩೩ ವರ್ಷದಿಂದ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ಶಿಕ್ಷಕಿಯಾದ ಬಿ.ವಿ.ಫರೀದಾ ಇವರಿಗೆ ಈ ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸುರುದು ಮಹಿಳಾ ಶಿಕ್ಷಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. 1988ರಂದು ಮುಂಡಗೋಡ ಓಣಿಕೇರಿ ಗ್ರಾಮದಲ್ಲಿ ವೃತ್ತಿ ಆರಂಭಿಸಿ ೫ ವರ್ಷದ ಬಳಿಕ ತಾಲೂಕಿಗೆ ಆಗಮಿಸಿ ಮಂಕಿ ಗಂಡುಮಕ್ಕಳ ಶಾಲೆ, ಹೆಣ್ಣು ಮಕ್ಕಳ ಶಾಲೆ, ಹೊನ್ನಾವರ ನಂಬರ್ ೧ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿ ಪ್ರಸುತ್ತ ಕಾಸರಕೋಡ ಟೊಂಕಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿಯೇ ದೇವರು ಎಂದು ನಿಭಾಯಿಸುತ್ತಾ ಹಲವು ವಿದ್ಯಾರ್ಥಿಗಳಿಗೆ ಜ್ಞಾನಜ್ಞನೆಯಲ್ಲಿ ಸಂತಸ ಕಂಡಕೊಂಡವರು. ಕುಟುಂಬದವರ ಸಹಕಾರ ವೃತ್ತಿ ಬಾಂಧವರ ಸಲಹೆಯೆ ಈ ಪ್ರಶಸ್ತಿ ಬಂದಿದ್ದು, ಇನ್ನಷ್ಟು ಜವಬ್ದಾರಿ ಹೆಚ್ಚಿಸಿದೆ ಎಂದರು.ಜಿಲ್ಲಾ ಮಟ್ಟದಲ್ಲಿ ಕೊಡಮಾಡುವ ಈ ಪ್ರಶಸ್ತ್ರಿಗೆ ಆಯ್ಕೆಯಾದ ತಾಲೂಕಿನ ಮೂವರು ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
Leave a Comment