ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪುರಸಭೆ ಮಾಸಿಕ ಸಭೆ ದಿನಾಂಕ 07-08-2021 ರಂದು ನಡೆಯಿತು. ಮಾಸಿಕ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ ನಂತರ 24*7 ಕುಡಿಯುವ ನೀರಿನ ಯೋಜನೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ದಿನಕ್ಕೆ ಕೇವಲ 1 ಗಂಟೆ ಮಾತ್ರ ನೀರು ಬರುತ್ತಿದೆ ಎಂದು ಪುರಸಭೆ ಸದಸ್ಯ ಶಂಕರ ಬೆಳಗಾವಕರ, ಸುರೇಶ ತಳವಾರ ಜೈನ ಲಿಮಿಟೆಡ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿದ ಎಲ್ಲ ಸದಸ್ಯರು ಅವರನ್ನು ಬೆಂಬಲಿಸಿ ಮುಂದಿನ ಸಭೆಯಲ್ಲಿ ಕಂಪನಿಯ ಮುಖ್ಯಸ್ಥರೆ ಖುದ್ದಾಗಿ ಹಾಜರಿದ್ದು ಸಮಸ್ಯೆಗೆ ಪರಿಹಾರ ನೀಡಿದ ನಂತರವೇ ಗುತ್ತಿಗೆ ಅವಧಿಯನ್ನು ಮುಂದುವರೆಯಿಸುವ ಬಗ್ಗೆ ಯೋಚಿಸೋಣ ಎಂದರು.

ಪ್ರತಿ ತಿಂಗಳ 15 ನೇ ತಾರೀಖಿನ ಒಳಗೆ ಜಮಾ ಖರ್ಚು ನೀಡಬೇಕು, ಜೆರಾಕ್ಸ್ ಮಾಡಿಸಲು 65,000/- ದಷ್ಟು ಬಿಲ್ ನೀಡುವ ಬದಲು ಹೊಸ ಜೆರಾಕ್ಸ್ ಮಷೀನ್ ಕೊಂಡು ಕೊಳ್ಳಬೇಕು , ಪುರಸಭೆ ವಾಹನದಲ್ಲೇ ಸಾರ್ವಜನಿಕ ಘೋಷಣೆ ಮಾಡಬೇಕು, ಕಾರ್ಪೋರೇಶನ ಬ್ಯಾಂಕ್ ಮೇಲಿನ ಅಂಗಡಿಗಳಿಗೆ ಬಾಡಿಗೆ ದರ ಹೆಚ್ಚಳ ಮಾಡುವುದು, ದಸರಾ ಹಬ್ಬಕ್ಕಾಗಿ ಬನ್ನೀ ಮಂಟಪದ ಸುಧಾರಣೆ, ಎಲ್ಲ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದಂತೆ ಕನಿಷ್ಠ ಕೂಲಿ ನೀಡುವುದು, 8 ಪುರಸಭೆ ಕಾರ್ಮಿಕರನ್ನು ಕೆಲಸದಿಂದ ತೆಗೆಯದೆ ಮುಂದುವರೆಸಲು ಎಲ್ಲ ಸದಸ್ಯರಿಂದ ಒಪ್ಪಿಗೆಯ ಠರಾವ, ಮೋತಿ ಕೆರೆಯಲ್ಲಿ ಸ್ವಚ್ಛತೆಯೊಂದಿಗೆ ಮೀನು ಗಾರಿಕೆ ಮಾಡಲು, ಹೊಸ ಪುರಸಭೆ ಕಟ್ಟಡ ಮುಂದೆ ಫೇವರ ಹಾಕಲು ಟೆಂಡರ ಕರೆಯುವುದು ಈ ಎಲ್ಲ ವಿಷಯಗಳನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೆಕರ್, ಪುರಸಭೆ ಅಧ್ಯಕ್ಷ ಅಜರ ಬಸರಿಕಟ್ಟಿ, ಉಪಾಧ್ಯಕ್ಷ ಸುವರ್ಣ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಚೌಹಾಣ, ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಪುರಸಭೆ ಎಲ್ಲ ಸದಸ್ಯರು ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗಳು ಹಾಜರಿದ್ದರು.
ವರದಿಮಂಜುನಾಥ. ಎಚ್. ಮಾದಾರಹಳಿಯಾಳ.
Leave a Comment