ಹೊನ್ನಾವರ: ಪಟ್ಟಣz ಪ್ರಮುಖ ಕೇಂದ್ರದಲ್ಲಿ ಒಂದಾದ À ಪ್ರಭಾತಗರದಲ್ಲಿರುವ ಶೌಚಾಲಯ ಸುತ್ತಲೂ ಪೊದೆಗಳು ಬೆಳೆದಿದ್ದು, ಸಾರ್ವಜನಿಕರಿಗೆ ಸೌಚಾಲಯಕ್ಕೆ ತೆರಳಲು ದಾರಿ ಕಾಣದಂತಾಗಿದೆ.
ಪೊದೆಗಳು ಬೆಳೆದ ಪರಿಣಾಮ ಶೌಚಾಲಯ ನೋಡುವುದಕ್ಕೆ ಮಾತ್ರ ಸೀಮೀತವಾಗಿದ್ದು, ಕೆಲ ತಿಂಗಳಿನಿಂದ ಸಾರ್ವಜನಿಕರ ಬಳಕೆ ಸಿಗುತ್ತಿಲ್ಲ. ಪಟ್ಟಣದ ಪ್ರಮುಖ ಸ್ಥಳವಾಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವುದರಿಂದ ಪ್ರತಿನಿತ್ಯವು ಸಾವಿರಾರು ಜನರು ಇದೆ ಮಾರ್ಗದಲ್ಲಿ ಸಂಚರಿಸುತ್ತಾರೆ.
ಕೆಲ ವರ್ಷದ ಹಿಂದೆ ಸಾರ್ವಜನಿಕರಿಗೆ ಅನೂಕೂಲವಾಗಲಿ ಎಂದು ನಿರ್ಮಿಸಿದ ಶೌಚಾಲಯ ಸುತ್ತಲೂ ಇಂದು ಮುಳ್ಳು ಪೊದೆಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಯಾವ ಮಾರ್ಗದಿಂದ ಹೊಗಬೇಕು ಎನ್ನುವುದು ಗೋಚರವಾಗುತ್ತಿಲ್ಲ.À ಶೌಚಾಗೃಹದ ಸುತ್ತಲ್ಲೂ ಮುಳ್ಳು ಪೋದೆಗಳು ಬೆಳೆದು ಕೆಲ ತಿಂಗಳುಗಳೇ ಊರುಳಿದರೂ ಇದರ ಸರಿಪಡಿಸುವ ಗೋಜಿಗೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಮುಂದಾಗಲಿಲ್ಲ.
ಸಾರ್ವಜನಿಕ ಸಮಸ್ಯೆ ಕುಂದುಕೊರತೆ ನಿವಾರಿಸಲು ಆಯ್ಕೆಯಾದ ಪಟ್ಟಣ ಪಂಚಾಯತಿ ಪ್ರತಿನಿಧಿಗಳು ಇಂತಹ ವಿಷಯದ ಬಗ್ಗೆ ಚಕಾರವೆತ್ತುತ್ತಿಲ್ಲ. ತಮ್ಮ ಪಕ್ಷದ ನಾಯಕರು ಬಂದಾಗ ಅವರೊಡನೆ ಹೆಜ್ಜೆ ಹಾಕಿ ವೇದಿಕೆಯಲ್ಲಿ ಪಕ್ಕ ಕುಳಿತುಕೊಳ್ಳುದರ ಹೊರತಾಗಿ ವಾರ್ಡ ಸಮಸ್ಯೆ ಬಗೆಹರಿಸುತ್ತಿಲ್ಲ ಎನ್ನುವುದು ಪಟ್ಟಣ ನಿವಾಸಿಗಳ ಆರೋಪವಾಗಿದೆ.
Leave a Comment