ಹೊನ್ನಾವರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪಯತ್ನ ನಡೆಸಿದ್ದ ವ್ಯಕ್ತಿಯನ್ನು ಮಂಕಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಳಸಿನಮೋಟೆಯ ಗಣಪಯ್ಯ ಚಂದ್ರು ಗೌಡ ಎನ್ನುವವರಾಗಿದ್ದಾರೆ.ಹೊನ್ನಾವರ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಮಹಿಳೆಗೆ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ನಡೆಸಿದ್ದಾರೆ ಎಂದು ಮಂಕಿ ಠಾಣಿಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು.
ಪ್ರಕರಣ ಭೇದಿಸಿದ ಮಂಕಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣದ ತನಿಖೆಯನ್ನು ಪೋಲಿಸರು ಮುಂದುವರೆಸಿದ್ದಾರೆ.
Leave a Comment