ಹಳಿಯಾಳ :
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಪುರಸಭೆಯ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೇ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಲಿಖಿತ ಮೌಖಿಕವಾಗಿ ಕೇಳಿಕೊಂಡರೂ ಯಾವುದೇ ಕ್ರಮ ಕೈಗೊಳ್ಳದೆ ಹೊರಗಿನವರಿಗೇ ಕಾಮಗಾರಿ ಟೆಂಡರ ನೀಡುವುದು ಮುಂದುವರೆದಿದೆ.
ಹೀಗೇ ಮುಂದುವರಿದರೆ ಸಂಘದ ಸದಸ್ಯರೆಲ್ಲರೂ ಸೇರಿ ಪುರಸಭೆಯ ಮುಂದೆ ಧರಣಿ ಮಾಡಬೇಕಾಗುತ್ತದೆ. ಏಕೆಂದರೆ ನಮಗೆ ಬೇರೇ ಊರು, ಹೊರ ರಾಜ್ಯಗಳಲ್ಲಿ ಟೆಂಡರ ಹಾಕಲು ಅಲ್ಲಿನ ಸ್ಥಳೀಯ ಗುತ್ತಿಗೆದಾರರು ಅವಕಾಶ ನೀಡುವುದಿಲ್ಲ. ಹೀಗಿದ್ದಮೇಲೆ ನಾವು ಬದುಕುವುದು ಹೇಗೆ ಎಂದು ಹಳಿಯಾಳ ತಾಲೂಕಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದವರು ತಮ್ಮ ನೋವನ್ನು ಪುರಸಭೆಯ ಮಾಸಿಕ ಸಭೆಯ ನಂತರ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೆಕರ, ಪುರಸಭೆ ಅಧ್ಯಕ್ಷ ಅಜರ ಬಸರೀಕಟ್ಟಿ, ಉಪಾಧ್ಯಕ್ಷ ಸುವರ್ಣ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚವಾಣ, ಮುಖ್ಯಧಿಕಾರಿ ವೆಂಕಟೇಶ್ ನಾಗಾನೂರ ಎಲ್ಲ ಪುರಸಭೆ ಸದಸ್ಯರ ಮುಂದೆ ಹೇಳಿಕೊಂಡರು.

ಇದಕ್ಕೆ ಪ್ರತಿಯಾಗಿ ಎಲ್ಲ ಸದಸ್ಯರು ನೀವು ಟೆಂಡರ ತೆಗೆದುಕೊಳ್ಳಲು ನಮ್ಮದೇನು ಅಭ್ಯಂತರವಿಲ್ಲಾ ಎಂದು ಹೇಳಿದರು. ನಿಮ್ಮಲ್ಲಿ ಹೀಗೇ ಒಗ್ಗಟ್ಟು ಮುಂದುವರೆಯಲಿ ಎಂದು ಕಿವಿ ಮಾತು ಹೇಳಿದರು. ಸಂಘದ ಅಧ್ಯಕ್ಷ ತಾನಾಜಿ ನಾಕಾಡಿ , ಉಪಾಧ್ಯಕ್ಷ ಕಿರಣ ಶೇಟವಣ್ಣವರ, ಅಶೋಕ ಘೋಟ್ನೆಕರ, ಅಬ್ದುಲ್ ಸಲಾಂ ದಲಾಲ, ರಾಘವೇಂದ್ರ ಭಜಂತ್ರಿ , ಅಜರ ಹಲಸಿ, ಇತರರು ಹಾಜರಿದ್ದರು.
ವರದಿ; ಮಂಜುನಾಥ. ಎಚ್. ಮಾದಾರ
Leave a Comment