ಹೊನ್ನಾವರ ತಾಲೂಕಿನ ಹುಕ್ಕೊಳ್ಳಿ ಉಪ್ಪೋಣಿಯ ಗರ್ಭಿಣಿ ಮಹಿಳೆಯೋರ್ವಳು ಪ್ರಸವ ವೇದನೆಯಿಂದ ಆಸ್ಪತ್ರೆಗೆ ತೆರಳಲಾಗದೆ ಮನೆಯಲ್ಲಿಯೇ ಹೆರಿಗೆಯಾಗಲು 108 ಆ್ಯಂಬುಲೆನ್ಸ್ ಸಿಬ್ಬಂದಿ ಸಂಗೀತಾ ಗೌಡ ನೆರವಾಗಿದ್ದಾರೆ.
ಗ್ರಾಮೀಣ ಭಾಗ ಹುಕ್ಕೊಳ್ಳಿಯ ನಿವಾಸಿ ಪ್ರೇಮಾ ಎನ್ನುವವರು ಅವಧಿ ಪೂರ್ವ ಪ್ರಸವ ವೇದನೆಯಿಂದ ಬಳಲುತ್ತಿದ್ದರು. ಕುಟುಂಬಸ್ಥರು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ತಕ್ಷಣ ಹೊನ್ನಾವರದ 108 ಸಿಬ್ಬಂದಿಯ ಚಾಲಕ ಅನಂತ ಶೆಟ್ಟಿ ಮತ್ತು ಸ್ಟಾಪ್ ನರ್ಸ್ ಸಂಗೀತ ಗೌಡ ಅವರು ಪ್ರೇಮಾ ಅವರ ಮನೆಗೆ ತೆರಳಿದ್ದಾರೆ. ಅದಾಗಲೇ ಹೆರಿಗೆ ನೋವಿನ ಕೊನೆಯ ಹಂತ ತಲುಪಿದ ಪ್ರೇಮಾರವರನ್ನು ಮನೆಯಲ್ಲೇ ಹೆರಿಗೆ ಮಾಡಿಸುವಲ್ಲಿ ನೆರವಾಗಿದ್ದಾರೆ.

ತಾಯಿ ಮಗು ಆರೋಗ್ಯವಾಗಿದ್ದು ಹೆಚ್ಚಿನ ಆರೈಕೆಯಾಗಿ ತಾಲೂಕು ಆಸ್ಪತ್ರೆ ಹೊನ್ನಾವರಕ್ಕೆ ಕಳುಹಿಸಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಹಗಲು ರಾತ್ರಿ ಯೆನ್ನದೆ ದಿನದ 24 ಗಂಟೆಯು ಸೇವೆ ನೀಡುತ್ತಿರುವ 108 ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Leave a Comment