• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಷ್ಟ್ರೀಯ ಹೆದ್ದಾರಿಯ ವಿಷಯದಲ್ಲಿ ಮಲತಾಯಿ ಧೋರಣೆ; ಕರುನಾಡ ವಿಜಯಸೇನೆಯಿಂದ ಪ್ರತಿಭಟನೆಯ ಎಚ್ಚರಿಕೆ

September 8, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮಲತಾಯಿ ಧೋರಣೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯದೇ ಹಾಗೆಯೇ ಮುಂದುವರೆದರೇ,ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಲೂಕಿನ ಮತದ ಮೇಲೆ ಕಣ್ಣಿಡುವ ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಗೆ ಸ್ಪಂದಿಸಲು ಮುಂದಾಗದೇ ಇರುವುದು ವಿಷಾಧನೀಯ. ಐ.ಆರ್.ಬಿ ಕಂಪನಿಯ ಪಟ್ಟಣದ ರಸ್ತೆ ಅಗಲೀಕರಣ ವಿಷಯದಲ್ಲಿ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲು ಸಂಘಟನೆ ಮುಂದಾಗಿದೆ. ನೆರೆಯ ಮಂಕಿ ಮುರ್ಡೇಶ್ವರ ಭಾಗದಲ್ಲಿ ೪೫ ಮೀಟರ್ ಹಾಗೂ ಸರ್ವೀಸ್ ರಸ್ತೆ  ಮಂಜುರಾಗಿದ್ದು, ಹೊನ್ನಾವರಕ್ಕೆ ಯಾಕಿಲ್ಲ ಈ ಸೌಲಭ್ಯ ಎಂದು ಪ್ರಶ್ನಿಸಿದರು.

IMG20210907115703

ಇಲ್ಲಿ ಪಟ್ಟಬದ್ದ ಹಿತಾಶಕ್ತಿಗಳ ಕೈವಾಡವಿದೆ. ಈ ಬಗ್ಗೆ ಶಾಸಕರು, ಸಚೀವರು ಸಂಸದರಿಂದ ಹಿಡಿದು ಸಂಭದಿಸಿದ ಅಧಿಕಾರಿಗಳಿಗೆ ಮನವಿ ಮಾಡಲು ಸಂಘಟನೆ ಮುಂದಾಗಲಿದೆ. ಸಮಸ್ಯೆ ಬಗೆಹರಿಯದೇ ಹೋದಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು. ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ  ತಾಲೂಕಿಗೇ ಎರಡು ಶಾಸಕರಿದ್ದಾರೆ. ಇಲ್ಲಿಯ ಮತದಾರರಿಂದಲೇ ಇವರು ಈ ಹಿಂದೆ ಆಯ್ಕೆಯಾಗಿದ್ದಾರೆ. ಹೆದ್ದಾರಿ ಅಗಲೀಕರಣದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳ ಸಭೆ ನಡೆಸಿ. 

ನಿಮ್ಮಿಂದ ಸಾಧ್ಯವಾಗದೇ ಹೋದಲ್ಲಿ ತಾಲೂಕಿನ ಪ್ರತೈಕ ವಿಧಾನಸಭಾ ಕ್ಷೇತ್ರ ಮಂಜುರು ಮಾಡುವಂತೆ ಸವಾಲು ಹಾಕಿದರು.ಸಂಘಟನೆಯ ಜಿಲ್ಲಾ ವಕ್ತಾರ ಶ್ರೀರಾಮ ಹೊನ್ನಾವರ ಮಾತನಾಡಿ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಸಂಚರಿಸುತ್ತಾರೆ. ಹಲವು ಬಾರಿ ಭೀಕರ ಅಪಘಾತಗಳು ಸಂಭವಿಸುತ್ತದೆ.

ಸರ್ವಿಸ್ ರಸ್ತೆ ತೀರಾ ಅಗತ್ಯವಿದ್ದು, ಬೇಡಿಕೆ ಈಡೇರದೇ ಹೋದಲ್ಲಿ ಆರಂಭಿಕವಾಗಿ ರಸ್ತೆ ತಡೆ, ರೋಡ್ ರೋಖೊ ಪ್ರತಿಭಟಿಸಿ ನಡೆಸಿ ನಂತರ ದಿನದಲ್ಲಿ ಜನಪ್ರತಿನಿಧಿಗಳು ಹೊನ್ನಾವರಕ್ಕೆ ಬಂದಾಗ ವಾಹನ ತಡೆದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೀರೀಶ ನಾಯ್ಕ ಹಡಿಕಲ್, ತಾಲೂಕ ಯುವ ಘಟಕದ ಅಧ್ಯಕ್ಷ  ರಾಘವೇಂದ್ರ ನಾಯ್ಕ, ಪದಾಧಿಕಾರಿಗಳಾದ ರಾಹುಲ್ ಮೇಸ್ತ, ನಿತಿನ್ ಅಂಬಿಗ, ಅಲ್ತಾಪ್ ಶೇಖ್, ಮಹೇಶ ಮೇಸ್ತ, ಸದಸ್ಯರು ಹಾಜರಿದ್ದರು.

ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲೇ ಹೆರಿಗೆಯಾಗಲು ನೆರವಾದ ಹೊನ್ನಾವರದ 108 ಸಿಬ್ಬಂದಿ ನರ್ಸ್ ಸಂಗೀತ ಗೌಡ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಐ.ಆರ್.ಬಿ ಕಂಪನಿಯ ಪಟ್ಟಣದ ರಸ್ತೆ, ಕಣ್ಣಿಡುವ ಜನಪ್ರತಿನಿಧಿಗಳು, ರಸ್ತೆ ಅಗಲೀಕರಣ ವಿಷಯದಲ್ಲಿ, ಸರ್ವಿಸ್ ರಸ್ತೆ ತೀರಾ ಅಗತ್ಯ, ಸಾರ್ವಜನಿಕರ ಪರವಾಗಿ ಧ್ವನಿ ಎತ್ತಲು

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,232 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...