• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹನುಮಂತ ಎಂ. ಪೈಗೆ ಶ್ರದ್ದಾಂಜಲಿ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ ಭಾಗಿ

September 13, 2021 by bkl news Leave a Comment

ಶರಣರ ಗುಣವನ್ನು ಮರಣದಲ್ಲಿ ನೋಡು ಎನ್ನುವ ದಾಸೋಕ್ತಿ ಇದೆ. ಅದರಲ್ಲಿ ಭಟ್ಕಳದ ಪುತ್ತಣ್ಣ ಸಂಸಾರಿಯಾಗಿದ್ದ ಸನ್ಯಾಸಿಯಾಗಿದ್ದು ಎಲ್ಲಾ ಸಮುದಾಯವನ್ನು ಪ್ರೀತಿಯಿಂದ ಕಂಡವರು ಎಂದು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಹೇಳಿದರು.ಅವರು ಭಟ್ಕಳದಲ್ಲಿ ಹನುಮಂತ ಎಮ್ ಪೈ(ಪುತ್ತಣ್ಣ) ಅವರ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಾರು ಶರಣರಾಗುತ್ತಾರೆ, ಯಾರು ಜವಾಬ್ದಾರಿಯನ್ನು ಪಾಲಿಸುತ್ತಾರೆ.

ಅವರ ಜೀವನವನ್ನು ಮರಣದಲ್ಲಿ ನೋಡಬೇಕು. ಮರಣದಲ್ಲಿ ಎರಡು ವಿಧವಿದ್ದು ಅದರಲ್ಲಿ ಭಗವದ್‌ಇಚ್ಚೆಯ ಮರಣ ಒಂದು. ಅದು ನಮ್ಮ ಪುತ್ತಣ್ಣನಿಗೆ ಲಭಿಸಿದೆ. ಅವರಿಗೆ ಉದ್ದಿಮೆ, ವ್ಯಾಪಾರಗಿಂತ ಹೆಚ್ಚು ಸಮಾಜದ ಕುರಿತು ಕಾಳಜಿ ಇತ್ತು. ಭಗವಂತನ ಸೇವೆ ಮಾಡುತ್ತಾ ಅವನ ಪಾದ ಸೇರುವದು ಭಗವಂತನ ಕ್ರಪೆ ಇದ್ದವರಿಗೆ ಮಾತ್ರ ಲಭ್ಯ.

ಇಂದು ಪುತ್ತಣ್ಣ ನಮ್ಮ ಜೊತೆ ಇಲ್ಲದಿರಬಹುದು. ಆದರೆ ಅವರು ರೂಪಿಸಿದ ಆದರ್ಶ, ಅವರು ಹಾಕಿ ಕೊಟ್ಟ ಮಾರ್ಗದರ್ಶನ, ಸಂದೇಶ ಅವರು ನಿರ್ಮಿಸಿದ ಇತಿಹಾಸ ನಮ್ಮ ಜೊತೆ ಇದ್ದು ಅದನ್ನು ನಾವು ಪಾಲಿಸಬೇಕಾಗಿದೆ. ವ್ಯಾಪಾರ ಮತ್ತು ಉದ್ದಿಮೆ ಜಿಎಸ್‌ಜಿ ಸಮುದಾಯಕ್ಕೆ ರಕ್ತಗತವಾಗಿ ಬಂದ ಗುಣ ಅದರ ಜೊತೆಯಲ್ಲಿ ಸಮಾಜ ಮತ್ತು ಇತರ ಸಮುದಾಯವನ್ನು ಪ್ರೀತಿಸುವ ಗುಣವೂ ಜಿಎಸ್‌ಬಿ ಸಮುದಾಯದಲ್ಲಿ ಮಾತ್ರ ಇದೆ. ಅಂದು ಕಷ್ಟದ ಸಮಯದಲ್ಲಿ ಆರ್‌ಎಸ್‌ಎಸ್ ನಲ್ಲಿ ಸಂಚಾಲಕನಾಗಿ ಕೆಲಸ ಮಾಡುವಾಗ ಅಂದು ಊಟ ತಿಂಡಿ ನೀಡಿ ಉಪಚರಿಸಿದವರು ಜಿಎಸ್‌ಬಿ ಸಮಾಜದವರು ಮಾತ್ರ. ಮರಣದ ನಂತರ ಕೆಲವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸಿದರೆ ಇನ್ನು ಕೆಲವರು ಮೋಕ್ಷ ದೊರೆಯಲಿ ಎನ್ನುತ್ತಾರೆ.

ಆದರೆ ಸಮಾಜ ಸುಧಾರಕ ಪುತ್ತಣ್ಣ ಮತ್ತೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು ಎಂದರು.  ಶಾಸಕ ಸುನೀಲ ನಾಯ್ಕ ಮಾತನಾಡಿ ಪುತ್ತು ಪೈ ಸರಳ ಸ್ವಭಾವದವರಾಗಿದ್ದು ಎಲ್ಲರನ್ನು ಪ್ರೀತಿಸುವ ಗುಣ ಹೊಂದಿದ್ದರು. ಅಂದು ಚುನಾವಣೆ ಸಮಯದಲ್ಲಿ ಅವರು ತೋರಿದ ಪ್ರೀತಿ, ನೀಡಿದ ಸಹಕಾರ ಅನನ್ಯ ಎಂದರು. ಪುತ್ತು ಪೈ ಸಹೋದರ ಸತೀಶ ಪೈ, ಶಿರಾಲಿ ಜಿಎಸ್‌ಬಿ ಸಮಾಜದ ಮುಖಂಡ ಡಿ.ಜೆ ಕಾಮತ, ಭಟ್ಕಳ ಶ್ರೀ ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ರಾಮದಾಸ ಪ್ರಭು, ಹಾಂಗ್ಯೋ ಐಸ್‌ಕ್ರೀಂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ,,ÀÄಬ್ಬಳ್ಳಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಪವನ ಪ್ರಭು ಮಾತನಾಡಿದರು. ಭಟ್ಕಳ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ನಾಗೇಶ ಕಾಮತ, ಗೋಕರ್ಣದ ಸುನೀಲ ಪೈ, ಅಚ್ಯುತ ಕಾಮತ, ಸುರೇಶ ವಾಸುದೇವ ಪ್ರಭು ಇತರರು ಇದ್ದರು.   ಆರಂಭದಲ್ಲಿ ಬಿಜೆಪಿ ರಾಝ್ಯಧ್ಯಕ್ಷ ಪುತ್ತು ಪೈ ಮನೆಗೆ ಬೇಟಿ ನೀಡಿ ಸಹೋದರರಿಗೆ ಸಾಂತ್ವಾನ ಹೇಳಿ, ಪುತ್ತು ಪೈ ಅವರ ಬಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸಿದರು.

ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿ ಸಾವು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: ಧರ್ಮದೇವಿ ಸಂಸ್ಥಾನದ ರಾಮದಾಸ ಪ್ರಭು, ಪುತ್ತು ಪೈ ಸರಳ ಸ್ವಭಾವ, ಸಮುದಾಯಕ್ಕೆ ರಕ್ತ, ಹಾಂಗ್ಯೋ ಐಸ್‌ಕ್ರೀಂ ವ್ಯವಸ್ಥಾಪಕ ನಿರ್ದೇಶಕ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,124 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar