• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸೆ.18 ರಂದು ಕೈಗಡಿ ಯಲ್ಲಿ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ

September 14, 2021 by Jayaraj Govi Leave a Comment

12ylp01

ಯಲ್ಲಾಪುರ ಃ
 ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ ಕಾರ್ಯಕ್ರಮವನ್ನು ವಿಶಿಷ್ಠವಾದ ಮತ್ತು ವಿನೂತನವಾದ ರೀತಿಯಲ್ಲಿ ಪಟ್ಟಣ ಪ್ರದೇಶದಿಂದ ಅತೀ ದೂರದಲ್ಲಿರುವ ಕುಗ್ರಾಮ ಕೈಗಡಿಯಲ್ಲಿ ಸೆ ೧೮ ರಂದು ಶನಿವಾರ ಬೆಳಿಗ್ಗಿನಿಂದ ಸಂಜೆಯವರೆಗೆ ಹಮ್ಮಿಕೊಂಡಿದೆ ಎಂದು ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ ಅವರು ತಿಳಿಸಿದರು.


ಅವರು ಕೈಗಡಿಯಲ್ಲಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ  ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ದಿನವಿಡಿಯ ಈ ರೈತರೊಟ್ಟಿಗೆ ಅನ್ನದಂಗಳ ಕಾರ್ಯಕ್ರಮದಲ್ಲಿ  ಇರುತ್ತಾರೆ. ಈ ಊರಿನ ವಿಶೇಷ ತಳಿಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.ಸಾವಯವ ಸೇರಿದಂತೆ ಮಾದರಿ ರೈತರೊಂದಿಗೆ, ವಿವಿಧ ಪರಿವಾರ ಸಂಘಸAಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕಥೆ ಸಂವಾದ ನಡೆಸಲಿದ್ದಾರೆ.

ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿರುವ ಈ ಕಾರ್ಯಕ್ರಮ ತಮ್ಮ ಈ ಊರಿನ ಪಾಲಿಗೆ ಬಂದಿರುವುದು ವಿಶೇಷವಾಗಿದ್ದು ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್,ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್,ಸಂಸದರು, ಜಿಲ್ಲೆಯ ಶಾಸಕರು, ನಿಗಮದ ಅಧ್ಯಕ್ಷರುಗಳು, ವಿಧಾನಪರಿಷತ್ ಸದಸ್ಯರು ವಿವಿದಸ್ಥರದ ಜನಪ್ರತಿನಿಧಿಗಳು, ತೋಟಗಾರಿಕೆ,ಕೃಷಿ ಹಿರಿಯ ಅಧಿಕಾರಿಗಳು ಕೃಷಿ ತೋಟಗಾರಿಕೆ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ.  ಜಿಲ್ಲೆಯ ಸಾಧಕ ರೈತರನ್ನು ಆಹ್ವಾನಿಸಲಾಗಿದೆ.ಕೃಷಿ,ತೋಟ, ಸಾಂಪ್ರದಾಯಕತೆ, ಬಿತ್ತನೆಬೀಜ,ವಿಶೇಷ ತಳಿ, ನಕ್ಷತ್ರವನ, ನವಗ್ರಹವನ,ಸೇರಿದಂತೆ ಹಲವು ಮಾಹಿತಿಯನ್ನೊಳಗೊಂಡ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ,ಹಾರ ತುರಾಯಿ ಸನ್ಮಾನಗಳಿರುವುದಿಲ್ಲ.ಸ್ಥಾನಿಕರು, ಸಂಘಟಕರು ಜನರನ್ನು ಆಹ್ವಾನಿಸುತ್ತಾರೆ.ರಸ್ತೆ ಸಂಚಾರ ದುರ್ಗಮ ವ್ಯವಸ್ಥೆಯಾಗಿದ್ದರೂ ಇಂತಹ ಹಳ್ಳಿಮೂಲೆಯಲ್ಲೊಂದು ಐತಿಹಾಸಿಕವಾದ ಕಾರ್ಯಕ್ರಮ ಸಂಯೋಜನೆ ನಮ್ಮದಾಗಬೇಕು.ಕಾರ್ಯಕ್ರಮದ ಶ್ರೇಯಸ್ಸಿಗೆ ರೈತರು ರೈತ ಮಹಿಳೆಯರು, ಸ್ಥಾನಿಕ ಪ್ರಮುಖರು, ಸಮಿತಿಯವರು ಇಲಾಖೆಯ ಮುಖ್ಯಸ್ಥರು  ಶೃಮಿಸಬೇಕೆಂದರು.ವಿವಿಧ ವ್ಯವಸ್ಥೆತೆಗಳ ಹೊಣೆಯನ್ನು ಗೊತ್ತುಪಡಿಸಲಾಯಿತು.ಸೇರಿದ್ದ ಗ್ರಾಮಸ್ಥರು ರಸ್ತೆ ವ್ಯವಸ್ಥೆ, ಗುಳ್ಳಪುರ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ದೋಣಿ ಇಲ್ಲವೇ ಬೋಟ್ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯವರು ಮುತುವರ್ಜಿವಹಿಸಬೇಕೆಂದು ಕೋರಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕಾರವಾರ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ಕೃಷಿ ನಿರ್ದೇಶಕ ಶಿವಪ್ರಸಾದ, ಅಂಕೋಲ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ನಾಯ್ಕ್,ರಾ.ಸ್ವ.ಸಂಘದ ದತ್ತಾತ್ರಯ ಎಸ್.ಭಟ್ಟ ಶೇವ್ಕಾರ್, ಭಾರತೀಯ ಕಿಸಾನ್ ಸಂಘದ ನರಸಿಂಹ ಸಾತೊಡ್ಡಿ, ಪ್ರಮುಖರಾದ ಭಾಸ್ಕರ ಮೋತಿಗುಡ್ಡ,ನಾರಾಯಣ ಹೆಗಡೆ ಕರಿಕಲ್, ಭಾಸ್ಕರ್ ಹಿಲ್ಲೂರ್, ನಾರಾಯಣ ಹೊಸ್ಮನೆ,ವೀಶ್ವೇಶ್ವರ ಹೆಬ್ಬಾರ್,ಅಣ್ಣಯ್ಯ ಹೆಗಡೆ,ಲ್ಯಾಂಪ್ಸ್ ಸೊಸೈಟಿಯ ರಾಮನಾಥ ಶಿದ್ದಿ, ಕುಣಬಿ ಸಮಾಜದ ಗಣಪತಿ ಕುಣಬಿ,ವಿ.ಎಸ್.ಭಟ್ಟ ಕಲ್ಲೇಶ್ವರ,ಗೌರೀಶ ವೈದ್ಯ, ವೆಂಕಣ್ಣ ವೈದ್ಯ,ಗೋವಿಂದ ಹೆಗಡೆ ಅಚವೆ ಸಲಹೆ ಸೂಚನೆ ನೀಡಿದರು. ಕೈಗಡಿ ಸುತ್ತ ಮುತ್ತಲಿನ ಹಾಗೂ ಕುಂಕಿ,ಶೇವ್ಕಾರ್, ಗುಳ್ಳಾಪುರ, ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ,ಅಚವೆ,ಹಿಲ್ಲೂರ್ ಭಾಗದ ಗ್ರಾಮಸ್ಥರು ಭಾಗವಹಿಸಿದ್ದರು.ದತ್ತಾತ್ರಯ ಹೆಗಡೆ ಕೈಗಡಿ ಸ್ವಾಗತಿಸಿ ನಿರ್ವಹಿಸಿದರು

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,132 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...