ಹೊನ್ನಾವರ : ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಚ ಹೊನ್ನಾವರದ ಉದ್ದೇಶದಿಂದ ಪರಿಸರದ ಕಾಳಜಿ ತೋರುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಉಪಯೋಗವನ್ನು ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ ತಿಳಿಸಿದರು.
ಪಟ್ಟಣ ಪಂಚಾಯತಿ ಸಭಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಪಟ್ಟಣ ಪ್ರದೇಶದಲ್ಲಿ ಸ್ವಚ್ಚತೆ ಹಾಗೂ ಪರಿಸರದ ಮೇಲಿನ ಕಾಳಜಿಯಿಂದ ಅಂಗಡಿಗಳಲ್ಲಿ ಹಾಗೂ ಸಾರ್ವಜನಿಕರಿಗೆ ನೀಡುವ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲ ಬಳಸದೇ ಪೇಪರ್ ಹಾಗೂ ಬಟ್ಟೆ ಚೀಲ ನೀಡುವ ಮೂಲಕ ಪ್ಲಾಸ್ಟಿಕ್ ನಿಷೇಧಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ನಮ್ಮ ಮುಂದಿನ ಪೀಳಿಗೆಗೆ ಶುಭ್ರ ವಾತವರಣ ವಿಡಲು ಪರಿಸರ ರಕ್ಷಣೆ ಅನಿವಾರ್ಯ ವಾಗಿದೆ.

ಈ ಹಿಂದೆಯೇ ಈ ಬಗ್ಗೆ ಚಿಂತನೆ ನಡೆಸಿದ್ದು, ಕೊರೋನಾ ಕಾರಣದಿಂದ ಕಾರ್ಯಚರಣೆ ವಿಳಂಭವಾಗಿದೆ. ಈಗಾಗಲೇ ಎಲ್ಲಾ ಅಂಗಡಿಗೂ ಮಾಹಿತಿ ನೀಡುವ ಜೊತೆ ಸೂಚನಾ ಫಲಕ ಅಳವಡಿಸಲಾಗಿದೆ. ತಾಲೂಕಿನ ವಿವಿಧಡೆಯ ಸಾರ್ವಜನಿಕರು ಪಟ್ಟಣಕ್ಕೆ ಅಗತ್ಯವಸ್ತು ಖರೀದಿಗೆ ಬರುವಾಗ ಪ್ಲಾಸ್ಟಿಕ್ ಹೊರಾತಾದ ಕೈಚೀಲ ತರುವಂತೆ ಮನವಿ ಮಾಡಿದರು.
“ಪ್ಲಾಸ್ಟಿಕ್ ಮುಕ್ತ ಸ್ವಚ್ಚ ಹೊನ್ನಾವರವನ್ನಾಗಿಸಲು ಸಂಘಸಂಸ್ಥೆಗಳು, ಅಂಗಡಿಯವರು ಸಾರ್ವಜನಿಕರು ಕೈಜೋಡಿಸೋಣ” ಎಂದರು.ಪ.ಪಂ.ಆರೊಗ್ಯ ನಿರೀಕ್ಷಕ ಸುನೀಲ ಗಾವಡಿ ಮಾತನಾಡಿ ೨೦೦೫ರಿಂದ ಈ ನಿಯಮ ಜಾರಿ ಆದ ಬಳಿಕ ಆಗಾಗ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಯ ಮಾಲೀಕರಿಗೆ, ಸಾರ್ವಜನಿಕರಿಗೆ ದಂಡ ವಿಧಿಸಿ ನೋಟಿಸ್ ನೀಡಲಾಗಿತ್ತು.
ಇದನ್ನು ಇನ್ನಷ್ಡು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಈಗ ಸಜ್ಜಾಗಿದ್ದೇವೆ. ಒಂದು ಬಾರಿ ಒಂದರಿಂದ, ಒಂದು ಕೆ.ಜಿ.ಯಷ್ಟು ಪ್ಲಾಸ್ಟಿಕ್ ದೊರೆತಲ್ಲಿ ೧೦೦ರೂ. ದಂಡ ೨ನೇ ಬಾರಿ ಸಿಕ್ಕಿ ಬಿದ್ದಲ್ಲಿ ೨೦೦ರೂ. ದಂಡ ವಿಧಿಸಿ, ಮೂರನೇ ಬಾರಿ ಅದೇ ತಪ್ಪು ಮುಂದುವರೆಸಿದರೆ, ಅಂಗಡಿಯ ಉದ್ದಿಮೆ ಪರವಾನಗಿಯನ್ನು ರದ್ದು ಮಾಡುವ ಜೊತೆ ಮುಟ್ಟುಗೋಲು ಹಾಕಿಕೊಳ್ಳಲು ಜೂನ್ ೯ರಂದು ಸರ್ಕಾರದಿಂದ ಆದೇಶ ಬಂದಿದೆ.
ಇದನ್ನು ಪಟ್ಟಣ ಪಂಚಾಯತಿ ಕಟ್ಟುನಿಟ್ಟಾಗಿ ಆದೇಶ ಪಾಲಿಸಲಿದೆ ಎಂದು ಎಚ್ಚರಿಸಿದರು. ಅಲ್ಲದೇ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಮಾಹಿತಿ ನೀಡಿದರೆ, ಮಾಹಿತಿ ನೀಡಿದವರ ಹೆಸರು ಗುಪ್ತವಾಗಿಟ್ಟು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಿದೆ. ಪಟ್ಟಣದಲ್ಲಿ ಸರ್ಕಾರದ ಈ ನಿಯಮ ಪಾಲಿಸುವ ಜೊತೆ,ಅಂಗಡಿ ಸುತ್ತಮುತ್ತಲು ಸ್ವಚ್ಚವಾಗಿಟ್ಟುಕೊಂಡವರಿಗೆ ಆಕರ್ಷಕ ಬಹುಮಾನ ನೀಡಲಿದೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment