ಭಟ್ಕಳ: ಗುಜರಾತನಿಂದ ಕೊಚ್ಚಿಗೆ ಶ್ಯಾಂಪು ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರನ ಕಿಡಿ ಹಾರಿದ್ದರ ಬಗ್ಗೆ ಶಿರೂರು ರೇಲ್ವೆ ಸ್ಟೇಷನ್ ಮಾಸ್ಟರ್ ಸಂದೀಪ್ ಕುಮಾರ ಅವರು ನೀಡಿದ ಮಾಹಿತಿಯ್ವನಯ ಭಟ್ಕಳದ ಅಗ್ನಿ ಶಾಮಕ ದಳ ಸಿಬ್ಬಂದಿಗಳ ಕಾರ್ಯಾಚರಣೆಯಿಂದ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿ ನಿಯಂತ್ರಣ ಕೊಠಡಿಗೆ ಕೋಲಂಡ್ ರಿಂದ ಸುರತ್ಕಲ್ 50 ಲಾರಿಗಳನ್ನು ತೆಗೆದುಕೊಂಡು ಹೊಗುತ್ತಿದ್ದ ರೈಲಿನಲ್ಲಿ ಗುಜರಾತ ನಿಂದ ಕೊಚ್ಚಿಗೆ ತೆರಳುತ್ತಿರುವ ಶಾಂಪೂ ತುಂಬಿದ ಲಾರಿಗೆ ರೈಲ್ವೆ ಇಲಾಖೆಯ ಹೈ ಪವರ್ ವಿದ್ಯುತ್ ವೈರ್ ನಿಂದ ಕಿಡಿ ಹಾರಿ ಲಾರಿ ಸಂಖ್ಯೆ GI -01-D-9547 ಲಾರಿಯ ಸಾಮಗ್ರಿ ತುಂಬಿದ ಸ್ಥಳಕ್ಕೆ ವಿದ್ಯುತ್ ನಿಂದ ಕಿಡಿ ಹಾರಿ ಬಿದ್ದಿದ್ದು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಆಗುವ ಅನಾಹುತವನ್ನು ತಪ್ಪಿಸಲಾಯಿತು.
ಘಟನಾ ಸ್ಥಳದಲ್ಲಿ ಭಟ್ಕಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್ ರಮೇಶ್ ಶೆಟ್ಟಿ, ಪ್ರಮುಖ ಅಗ್ನಿಶಾಮಕ ಮಹಮ್ಮದ್ ಶಫಿ, ಎಸ್. ಮೊಗಲ್, ಅಗ್ನಿ ಶಾಮಕ ಚಾಲಕ ಶಿವಪ್ರಸಾದ ನಾಯ್ಕ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Leave a Comment