ಹೊನ್ನಾವರ; ತಾಲೂಕಿನ ಗುಣಮಂತೆಯ ಬೊಳಕಟ್ಟೆ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವವನ್ನು ಮಂಕಿ ಪೋಲಿಸರು ಪತ್ತೆ ಮಾಡಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಣಮಂತೆಯ ಜಗದೀಶ ಶಂಭು ಗೌಡ ಎನ್ನುವವನು ಗುಣಂಮತೆಯ ಬೊಳಕಟ್ಟೆ ಸಮೀಪ ೬ ಸಾವಿರ ಮೌಲ್ಯದ ೩೦ ಗ್ರಾಂ ಗಾಂಜಾ ಮಾರಾಟ ಮಾಡುವ ಸಮಯದಲ್ಲಿ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಂಕಿ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.ಜಿಲ್ಲೆಯ ವಿವಿಧಡೆ ಗಾಂಜಾ ಪ್ರಕರಣ ಪತ್ತೆಯಾಗುತ್ತಿದ್ದರು, ತಾಲೂಕಿನಲ್ಲಿ ಪ್ರಕರಣ ಪತ್ತೆಯಾಗಿರಲಿಲ್ಲ. ಆದರೂ ತಾಲೂಕಿನ ವಿವಿಧ ಸೂಕ್ಷ್ಮ ಪ್ರದೇಶದಲ್ಲಿ ಗಾಂಜಾ ಸೇವನೆ ನಡೆಯುತ್ತಿದೆ ಎನ್ನುವುದರ ಕುರುಹು ಪತ್ತೆಯಾಗುತ್ತಿತ್ತು.
ಈ ಬಗ್ಗೆ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಯವರು ನಿಗಾ ಇಟ್ಟು ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಆಗ್ರಹ ಕೇಳಿ ಬರುತ್ತಿತ್ತು. ಇದು ಪೋಲಿಸ್ ಇಲಾಖೆಗೆ ಸವಲಾಗಿತ್ತು. ಇದೀಗ ಪ್ರಕರರಣದ ಜಾಡು ಪತ್ತೆಯಾಗಿದ್ದು,ಇವರೊಂದಿಗೆ ಇದರಲ್ಲಿ ಭಾಗಿ ಇರುವವರನ್ನು ಪೋಲಿಸ್ ಇಲಾಖೆ ಪತ್ತೆ ಮಾಡುವ ಮೂಲಕ ಬೇರು ಸಮೇತ ಕಿತ್ತು ಹಾಕಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Leave a Comment