ವಿರಾಜಪೇಟೆ : ನಿರ್ಮಾಣ ಹಂತದಲ್ಲಿರುವ ಮನೆಯ ಅವರಣದಲ್ಲೇ ಗಾಂಜಾ ಗಿಡ ಬೆಳೆದ ಪಶ್ಚಿ ಬಂಗಾಳ ಮೂಲದ ಇಬ್ಬರ ಕಾರ್ಮಿಕರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದವರು ಮತ್ತು ಹಾಲಿ ನಗರದ ಸಿಲ್ವ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ನಿರ್ಮಾಣ ಹಂತದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮೊಹಮ್ಮದ್ ಅಬ್ದುಲ್ ರಖೀಬ್ (28)ಮತ್ತು ಸಲೀಂ ಶೇಖ್ (33) ಬಂಧಿತ ಆರೋಪಿಗಳು.
ನಿಮಾರ್ಣ ಹಂತದ ಮನೆಯ ಅವರಣದಲ್ಲಿ ಗಾಂಜಾ ಬೆಳೆದ ಬಗ್ಗೆ ಸುಳಿವರಿತ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ. ಸುಮಾರು 1.800 ಕಿ.ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.
Leave a Comment