ಹೊನ್ನಾವರ: ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ,ಭಾರತೀಯ ಮಜ್ದೂರ್ ಸಂಘ ಸಂಯೋಜಿತದಲ್ಲಿ ವಿಶ್ವಕರ್ಮ ಸ್ಮರಣೆಯೊಂದಿಗೆ ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳ ಮತ್ತು ರಾಜ್ಯ ಕಾರ್ಯಕಾರಣಿ ಒಂದು ದಿನದ ಸಭೆ ನಡೆಯಿತು .
ಪಟ್ಟಣದ ಕಿಂತಾಲಕೇರಿ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಮತ್ತ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸ ದೀಪ ಬೆಳಗಿಸುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಸಾಫ್ಟ್ ವೇರ್ ಬದಲಾವಣೆಯ ಕೆಲಸ ನಡೆದು ಸೇವಾಸಿಂಧು ಸಾಫ್ಟ್ವೇರ್ ಬಂದ್ ಆಗಿರುವುದರ ಮತ್ತು ಅಡೆ-ತಡೆಯ ಸಮಸ್ಯೆ ಕುರಿತು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ 2017 ರಿಂದ 2020 ರವರೆಗೆ ಎಲ್ಲಾ ಧನಸಹಾಯಕ್ಕಾಗಿ ಸಲ್ಲಿಸಿರುವ ಅರ್ಜಿಗಳ ಹಣ ಬರೆದ ಬಾಕಿ ಉಳಿದಿರುವ ಕಡತಗಳ ಬಗ್ಗೆ. ಕೋವಿಡ್-19 ವೈರಸ್ ಸಂದರ್ಭದಲ್ಲಿ ಸರ್ಕಾರದ ಧನಸಹಾಯದ ಹಣ: ರೂ. 5000 ಅಥವಾ 3000 ಬರದೇ ಬಾಕಿ ಉಳಿದಿರುವ ಫಲಾನುಭವಿಗಳ ಹಣ ಜಮಾ ಆಗದೆ ಇರುವುದರ ಬಗ್ಗೆ.ಕಟ್ಟಡ ಕಾರ್ಮಿಕರ ಸಂಘಟನೆಯ ಹೆಸರಿನಲ್ಲಿ ನೋಂದಣಿ ಮತ್ತು ಮರು ನೋಂದಣಿ ಮಾಡಿ ಸಂಘದ ರಾಜ್ಯದ ವಂತಿಕೆಯನ್ನು ಕೊಡದೆ ಸಂಘಟನೆ ನಡೆಸುವವರ ಬಗ್ಗೆ ಚರ್ಚೆ ಸಂಘದ ವಂತಿಕೆಯನ್ನು ಕೊಡದೆ’ ಸಂಘದ ಚಟುವಟಿಕೆ ನಡೆಸಿದರೆ, ಸಂಘದಲ್ಲಿ ಹೋರಾಟ ಮಾಡುವ ಬಗ್ಗೆ.ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮತ್ತು ಮರು ನೋಂದಣಿ ಶುಲ್ಕ ರಹಿತ ಮಾಡದೆ ಸಂಘಕ್ಕೆ ರಾಜ್ಯದಲ್ಲಿ ನೋಂದಣಿ ಮತ್ತು ಮರು ನೊಂದಣಿ ಫೀ ಹಣವನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ.ಸೇರಿದಂತೆ ಕಟ್ಟಡ ಕಾರ್ಮಿಕರ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಪರಿಹಾರ ಬಗ್ಗೆ ಚರ್ಚೆ ನಡೆಯಿತು. ರಾಜ್ಯದ ವಿವಿಧ ಭಾಗದಿಂದ ನೊಂದಾಯಿತ ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕಾಧ್ಯಕ್ಷರುಗಳು ಆಗಮಿಸಿ ರಾಷ್ಟ್ರ ಹಾಗೂ ರಾಜ್ಯ ಘಟಕದ ಅಧ್ಯಕ್ಷರುಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಿ.ಟಿ ಪಾಟಿಲ್ ಮಾತನಾಡಿ ಕೊವಿಡ್ ಸಂದರ್ಭದಲ್ಲಿ ಸರ್ಕಾರ ನೀಡಿದ ಪರಿಹಾರ ಕಿಟ್ ವಿತರಣೆಯಲ್ಲಿ ಜನಪ್ರತಿನಿಧಿಗಳಿಂದ ಉಂಟಾದ ಲೋಪದೋಷ ಬಗ್ಗೆ, ಈ ಶ್ರಮ ಕಾರ್ಡ ಬಗ್ಗೆ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕುರಿತು ಚರ್ಚೆಯಲ್ಲಿದೆ ಎಂದರು.
ಬಿಎಮ್ ಎಸ್ ರಾಜ್ಯಾಧ್ಯಕ್ಷ ಚಿಂತಾಮಣಿ ಕೂಡಳ್ಳಿ ಮಾತನಾಡಿ ಇಲಾಖೆಯಲ್ಲಿನ ಸಮಸ್ಯೆ ಬಗ್ಗೆ ಹಲವಾರು ರೀತಿಯ ಹೋರಾಟ ನಡೆಸಲಾಗಿದೆ. ಈಗಾಗಲೇ ಮದುವೆ ಅರ್ಜಿ ಸಲ್ಲಿಸಿದವರಿಗೆ ಶೇಕಡ 90 ರಷ್ಟು ಹಣ ಪಾವತಿಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸಂಭಂದಿತ ಪರಿಹಾರ ಧನ ಬಾಕಿ ಇದೆ ಎಂದರು.
ಬಿಎಂಎಸ್ ಸಂಘಟನೆಯ ರಾಜ್ಯ ಕಾರ್ಯಧರ್ಶಿ ಹರಿಶ್ಚಂದ್ರ ನಾಯ್ಕ ಮಾತನಾಡಿ ಸರ್ಕಾರದ ಪರಿಹಾರ ಧನ ಕಾರ್ಮಿಕರಿಗೆ ಸರಿಯಾಗಿ ತಲುಪುತ್ತಿಲ್ಲ. ಹಲವಾರು ರೀತಿಯಲ್ಲಿ ಆನ್ಲೈನ್ ಸಮಸ್ಯೆ ಇದೆ. ಸರ್ಕಾರ ಮತ್ತು ಮಂಡಳಿಯಿಂದ ಸಂಘಟನೆಯನ್ನು ಹತ್ತಿಕ್ಕುವ ಕೆಲಸ ನಡಿತಾ ಇದೆ. ನಿಜವಾದ ಕಾರ್ಮಿಕರಿಗೆ ನ್ಯಾಯ ಸಿಗಬೇಕು.ಕಟ್ಟಡ ಕಾರ್ಮಿಕರ ನಿಧಿ ಅವರ ಒಳಿತಿಗಾಗಿ ಉಳಿಯಬೇಕು ಎಂದರು.
ಬಿ ಎಮ್ ಎಸ್ ರಾಷ್ಟ್ರೀಯ ಪ್ರಧಾನಕಾರ್ಯಧರ್ಶಿ ರವಿಶಂಕರ ರೆಡ್ಡಿ ಅಲ್ಲುರ್ ,ರಾಜ್ಯಗೌರವಾಧ್ಯಕ್ಷ ಡಿ ವಿ ರಾಮಮೂರ್ತಿ,ರಾಜ್ಯ ಉಪಾಧ್ಯಕ್ಷ ಕಲೀಮುಲ್ಲ ಕಂಬಳಿ, ರಾಜ್ಯಉಪಾಧ್ಯಕ್ಷ ನಾಗೇಶ ಎಲ್ ನಾಯ್ಕ, ರಾಜ್ಯಉಪಾಧ್ಯಕ್ಷೆ ತಾಯೀರಾ, ರಾಜ್ಯ ಖಜಾಂಚಿ ಕಮಲಮ್ಮ, ಪ್ರಶಾಂತ ಕಲಾದಗಿ , ರಾಜ್ಯ ಸದಸ್ಯ ಈಶ್ವರ ನಾಯ್ಕ, ಬಿ ಎಮ್ ಎಸ್ ಕಾರ್ಯಧರ್ಶಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಜಯರಾಜ್ ಶಾಲೀಯಾನ ಮತ್ತಿತರರು ಉಪಸ್ಥಿತರಿದ್ದರು.
Leave a Comment