ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮದ ಭಾಸ್ಕೇರಿಯ ಬಾಬು ನಾಯ್ಕ ಇವರ ಮನೆ ಮಳೆಗಾಲದಲ್ಲಿ ಭಾಸ್ಕೇರಿ ಹೊಳೆಗೆ ಹರಿದು ಬರುವ ನೀರಿನಿಂದ ಮಣ್ಣು ಕೊರೆತ ಸಂಭವಿಸಿ ಮನೆಯೇ ಕುಸಿತವಾಗುವ ಆತಂಕ ಎದುರಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಆವರಿಸುವ ಭಾಸ್ಕೇರಿ ಹೊಳೆಯ ಸಮೀಪದಲ್ಲೆ ಇರುವ ಬಾಬು ನಾಯ್ಕ ಇವರ ಮನೆ ಮುಂದಿನ ದಿನದಲ್ಲಿ ಕುಸಿಯುವ ಹಂತ ತಲುಪಿದೆ.
ಮಳೆಗಾಲದಲ್ಲಿ ಈ ಭಾಸ್ಕೆರಿ ನದಿಯು ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಲಿದೆ. ಅಲ್ಲದೆ ಕಳೆದ ಹಲವು ವರ್ಷದದಿಂದ ನೀರಿನ ರಬಸಕ್ಕೆ ಹೊಳೆಯ ಪಕ್ಕದಲ್ಲಿರುವ ದಂಡೆಯ ಮಣ್ಣು ಕುಸಿದು ನೀರುಪಾಲಾಗುತ್ತಿದೆ. ಯಾವುದೇ ತಡೆಗೋಡೆ ಇರದ ಕಾರಣ ವರ್ಷದಿಂದ ವರ್ಷಕ್ಕೆ ಮಣ್ಣು ಕೊಚ್ಚಿ ಹೋಗಿ ನೀರು ಪಾಲುಗುತ್ತಿದೆ.

ಹತ್ತಾರು ಮನೆಗಳಿಗೆ ತೆರಳುವ ಮಾರ್ಗವು ಬಂದ್ ಆಗಿದ್ದು ಬದಲಿ ಮಾರ್ಗ ಅನುಸರಿಸುತ್ತಿದ್ದಾರೆ. ನದಿ ತಿರುವು ಇರುವ ಪ್ರದೇಶಗಳಲ್ಲಿ ಅತಿ ಹೆಚ್ಚು ಕೊರೆತ ಉಂಟಾಗುದರಿಂದ ಈ ಭಾಗಕ್ಕೆ ತಿವ್ರ ಹಾನಿಯಾಗಿದೆ. ಇದೀಗ ಮನೆ ಸಮೀಪ ವ್ಯಾಪಿಸಿರುದರಿಂದ ಮಳೆಗಾಲದಲ್ಲಿ ಆತಂಕದಲ್ಲೆ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಕಳೆದ ೧೦ ವರ್ಷದಲ್ಲಿ ಸುಮಾರು ೧೦ ಅಡಿ ಉದ್ದದ ಜಾಗಗಳು ಕೊರತ ಉಂಟಾಗಿ ತೆಂಗಿನ ಮರಗಳು ಮತ್ತು ಅಡಿಕೆ ಮರಗಳು ನೀರು ಪಾಲಾಗಿದೆ.
ಪ್ರತಿ ಬಾರಿ ನೆರೆ ಬಂದಾಗ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಿನ ಬಾರಿ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಬದಲಾದರೂ ಸಮಸ್ಯೆ ಮಾತ್ರ ಹೆಚ್ಚಾಗುತ್ತಲ್ಲೆ ಇದೆ ಎನ್ನುವುದು ಸ್ಥಳಿಯ ನಿವಾಸಿಗಳು ಆರೋಪಿಸುತ್ತಿದ್ದಾರೆ. ೨೦ ವರ್ಷದಿಂದ ವಿವಿಧ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಕಾಟಚಾರಕ್ಕೆ ಸ್ಥಳ ವಿಕ್ಷಣೆ ಮಾಡಿ ಭರವಸೆ ನೀಡುವುದೇ ಹೋರತು ಈವರೆಗೂ ನ್ಯಾಯ ದೊರಕಿಲ್ಲ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮನೆ ಮಾಲೀಕ ಬಾಬು ನಾಯ್ಕ ಮಾತನಾಡಿ ಮಳೆಗಾಲದಲ್ಲಿ ಈ ಭಾಗದವರು ರಾತ್ರಿ ಹಗಲು ಭಯದಲ್ಲೇ ಜೀವನ ನಡೆಸುವ ಸ್ಥಿತಿ ಇದೆ. ನೀರು ಬಂದು ದಂಡೆಯನ್ನು ಕೊಚ್ಚಿಕೊಂಡು ಹೋಗುತ್ತಿದೆ. ಮನೆಯ ಹತ್ತಿರ ಬಂದಿದೆ. ಈಗಾಗಲೆ ೧೦ ಅಡಿ ಉದ್ದದಷ್ಟು ಜಾಗ ಕೊಚ್ಚಿ ನೀರು ಪಾಲಾಗಿದೆ. ವಿವಿಧ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿದೆ ಎಂದರು.
Leave a Comment