
ಯಲ್ಲಾಪುರ : ನಮ್ಮ ಸಹಕಾರಿಯ 17ನೇ ವರ್ಷ ಪೂರೈಸಿದ್ದು, ಹಾಗೂ ಸದರಿ ವರ್ಷ 24.63 ಲಕ್ಷ ನಿಕ್ಕಿ ಲಾಭ ಆಗಿದ್ದು,ಈ ವರ್ಷ ಒಟ್ಟೂ 62 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲಾಗಿದೆ ಎಂದು ಶ್ರೀ ಮಾತಾ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಮಾರ್ಚ-2021 ಕ್ಕೆ 88.60 ಲಕ್ಷ ಶೇರು ಬಂಡವಾಳವನ್ನು ಹೊಂದಿದ್ದು, ಹಾಗೂ 4886 ಸದಸ್ಯರನ್ನು ಹೊಂದಿದೆ ಇತರೇ ನಿಧಿಗಳು ಹಾಗೂ ಠೇವುಗಳು ಸೇರಿ ರೂ.15.33 ಕೋಟಿ ಇದ್ದು, ಪ್ರಸಕ್ತ ಸಾಲಿನಲ್ಲಿ ರೂ.11.49 ಕೋಟಿ ಸಾಲವನ್ನು ವಿತರಿಸಲಾಗಿದೆ. ವಿವಿಧ ಬ್ಯಾಂಕುಗಳಲ್ಲಿ ರೂ.4.42 ಕೋಟಿ ಹಣವನ್ನು ತೊಡಗಿಸಿದ್ದು, ಹಾಗೂ ಠೇವುದಾರರ ಭದ್ರತೆ ದೃಷ್ಟಿಯಿಂದ ಹೆಚ್ಚಿನ ನಿಘಾ ಇಡಲಾಗಿದೆ. ಹಾಗೂ ಯಾವುದೇ ರೀತಿಯ ಸಾಲವನ್ನು ಬ್ಯಾಂಕಿನಿಂದ ಪಡೆದಿರುವುದಿಲ್ಲ,, 5 ಲಕ್ಷ ರೂಪಾಯಿ ಅನುಕಂಪ ಪರಿಹಾರ ನಿಧಿಗೂ, 5 ಲಕ್ಷ ರೂಪಾಯಿಯನ್ನು ಕಟಡ ನಿಧಿಗಾಗಿ ತೆಗೆದಿರಿಸಲು ನಿರ್ಧರಿಸಲಾಗಿದೆ.
ಸಹಕಾರಿಯು ನಾಲ್ಕು ಶಾಖೆಗಳನ್ನು ಹೊಂದಿದ್ದು ಎಲ್ಲಾ ಶಾಖೆ ಲಾಭದಲ್ಲಿ ಮುಂದುವರಿದಿದೆ. ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಸಹಕಾರಿಯ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಎಲ್ಲಾ ಸದಸ್ಯರುಗಳಿಗೆ ವಿಮಾ ಭದ್ರತೆ ನೀಡುತ್ತಾ ಬಂದಿದ್ದೇವೆ. ಸಹಕಾರಿಯ ಸದಸ್ಯರ ಮಕ್ಕಳಿಗಾಗಿ ವಿದ್ಯಾರ್ಥಿ ಪ್ರೋತ್ಸಾಹ ಧನ, ಜೊತೆಗೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ನಮ್ಮ ಮಿತಿಯಲ್ಲಿ ಪರಿಹಾರ ಧನ ನೀಡುತ್ತ ಬಂದಿದ್ದೇವೆ. ಪ್ರಸಕ್ತ ಸಾಲಿನಲ್ಲಿ ನಮ್ಮ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಭೂಕುಸಿತಕ್ಕೊಳಗಾದ ಪ್ರದೇಶದಲ್ಲಿ ಹಾನಿಗಿಡಾದಂತವರಿಗೆ ಪರಿಹಾರ ನೀಡಲು “ಶ್ರೀ ಸರ್ವಜ್ಞೆಂದ್ರ ಸರಸ್ವತಿ ಪ್ರತಿಷ್ಠಾನ, ಸ್ವರ್ಣವಲ್ಲಿ ಸಂಸ್ಥಾನಕ್ಕೆ ದೇಣಿಗೆ ನೀಡಿದ್ದಿದೆ. . ಕೋವಿಡ್ ಹಿನ್ನಲೆಯಲ್ಲೂ ಕೂಡ ಸದಸ್ಯರ ಸಹಕಾರದಿಂದ ಸಾಲ ವಸೂಲಿಯಲ್ಲಿ ಶೇ.85 ಸಾಧಿಸಿದೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉತ್ತಮ ಗ್ರಾಹಕರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೂರ್ಯ ನಾರಾಯಣ ಭಟ್.ವನರಾಗ ಶರ್ಮಾ,ಕೆ. ಎಸ್ ಭಟ್ ಅನಗೋಡ್, ಎಸ್. ಎನ್ ಹೆಗಡೆ,ಕೆ. ಎನ್ ಹೆಗಡೆ, ಆರ್. ಎಮ್ ಹೆಗಡೆ,ಆರ್. ಡಿ ಹೆಬ್ಬಾರ್, ರವಿ ಹೆಗಡೆ, ಸಿ. ಎಸ್ ಪತ್ರೆಕರ ಉಪಸ್ಥಿತರಿದ್ದರು.
Leave a Comment