ಹೊನ್ನಾವರ: ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ವಿರೋಧಿ ಆಡಳಿತ ನೀಡುತ್ತಿದೆ ಎಂದು ಉತ್ತರ ಕನ್ನಡಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆಕಡತೋಕಾ ಆರೋಪಿಸಿದರು.ಕೇಂದ್ರ ಸರಕಾರದ ಮೂರು ಪ್ರಮುಖ ಕಾಯ್ದೆ ವಿರೋಧಿಸಿಸೋಮವಾರಹೊನ್ನಾವರದಲ್ಲಿ ನಡೆದ ಭಾರತ್ ಬಂದ್ಪ್ರತಿಭಟನೆಯಲ್ಲಿ ಮಾತನಾಡಿದ ಅವರುಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳವಿರುದ್ದ ಜನರು ಎಚ್ಚರಗೊಂಡಿದ್ದು, ಬೀದಿಗಳಿದು ಪ್ರತಿಭಟನೆ ಮಾಡುವ ಕಾಲ ಬಂದಿದೆಎಂದರು.ಪೆಟ್ರೂಲ್ ಡಿಸೇಲ್ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಹಣದುಬ್ಬರಹೆಚ್ಚಾಗಿದೆ.
ಎಪಿಎಂಸಿ ನಾಶವಾಗುತ್ತಿದೆ. ರೈತರಬೆಳೆಗಳನ್ನು ಖಾಸಗಿಯವರುಖರೀದಿಸುವಂತೆ ಮಾಡುತ್ತಿದ್ದಾರೆ. ಪ್ರತಿವರ್ಷಒಂದುವರೆ ಕೋಟಿಯಷ್ಟು ನಿರುದ್ಯೋಗ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದು ನಿರುದ್ಯೋಗ ಸಮಸ್ಯೆ ಹೆಚ್ಚುವಂತೆ ಮಾಡಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರುತ್ತಲ್ಲೆ ಇದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬಲೆ ಕಡಿಮೆ ಇದ್ದರೂ ಪೆಟ್ರೋಲ್,ಡಿಸೈಲ್ ಬೆಲೆ ಗಗನಕ್ಕೇರಿತ್ತಿದೆ.

ಜನಸಾಮಾನ್ಯರುಜೀವನ ನಡೆಸುವುದು ಕಷ್ಟವಾಗುತ್ತಿದೆ.ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಸರಕಾರಗಳನ್ನು ಕಿತ್ತೆಸೆಯಬೇಕು. ಚುನಾವಣೆ ಸಮಯದಲ್ಲಿ ಭಯೊತ್ಪಾದನೆಯ ಗುಮ್ಮ ಬಿಟ್ಟು ಅಧಿಕಾರಕ್ಕೆ ಬಂದು ಶ್ರೀಮಂತ ವರ್ಗದ ಪರ ಆಡಳಿತ ಮಾಡುತ್ತಾ ಖಾಸಗಿಯವರಿಗೆ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ ಎಂದರು.
ಪುಷ್ಟಾ ಮಹೇಶ ನಾಯ್ಜ ಮಾತನಾಡಿಬಿಜೆಪಿ ಆಡಳತದಲ್ಲಿ ಅಡುಗೆ ಅನಿಲದ ಬಲೆ ಏರಿಕೆಜನರನ್ನು ಸಂಕಷ್ಟಕಕ್ಕೀಡು ಮಾಡಿದೆ.ಕಿಸಾನ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿದೀಪಕ ನಾಯ್ಕ ಮಂಕಿ, ತಾಲೂಕ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ, ಕಿಸಾನ್ ಕಾಂಗ್ರೆಸ್ ಮಂಕಿಘಟಕದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಂಕಿ,ಚಂದ್ರಶೇಖರ ಗೌಡ,ಅಣ್ಣಪ್ಪ ಗೌಡ, ತಿಮ್ಮಪ್ಪ ಗೌಡಮತ್ತಿತರರು ಪಾಲ್ಗೊಂಡಿದ್ದರು.
ರಸ್ತೆ ತಡೆ: ಶರಾವತಿ ವೃತ್ತದಲ್ಲಿ ಪ್ರತಿಭಟನಾ ಸಭೆ ಬಳಿಕ ಪ್ರತಿಭಟನಾ ಕಾರರುರಾಷ್ಟೀಯ ಹೆದ್ದಾರಿ ೬೬ ದಲ್ಲಿ ರಸ್ತೆ ತಡೆ ನಡೆಸಿಪ್ರಧಾನಿ ನರೇಂದ್ರ ಮೊದಿ ನೇತೃತ್ವದಕೇಂದ್ರ ಬಿಜೆಪಿ ಸರಕಾರ ಹಾಗೂಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿನೇತೃತ್ವದ ರಾಜ್ಯ ಬಿಜೆಪಿ ಸರಕಾರದ ವಿರುದ್ದಘೋಷಣೆ ಕೂಗಿದರು.ಜನಜೀವನ ಸಹಜ ಸ್ಥಿತಿ: ಪಟ್ಟಣದಲ್ಲಿ ಹಾಗೂಗ್ರಾಮೀಣ ಭಾಗದಲ್ಲಿ ಜನಜೀವನ ಎಂದಿನಂತೆ ಸಹಜಸ್ಥಿತಿಯಲ್ಲಿತ್ತು. ಅಂಗಡಿ ಮುಂಗಟ್ಟುಗಳು,ಹೊಟೆಲ್ ಗಳು ಎಂದಿನಂತೆ ತೆರೆದಿದ್ದು ಬಂದ್ ಎಪೆಕ್ಟ ಇರಲಿಲ್ಲ. ಕಿಸಾನ್ ಕಾಂಗ್ರೇಸ್ ಸಿ.ಐಟಿಯು ರೈತ ಸಂಘದ ಹೊರತಾಗಿ ಕನ್ನಡಪರ ಹಾಗೂ ಉಳಿದ ಸಂಘಟನೆ ರಾಜ್ಯ ಮಟ್ಟದಲ್ಲಿ ಬೆಂಬಲ ನೀಡಿದರೂ ತಾಲೂಕಿನಲ್ಲಿ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ.
Leave a Comment