ಯಲ್ಲಾಪುರ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಮುಂಡಗೋಡ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಹುಣಶೆಟ್ಟಿಕೊಪ್ಪ ಸಮೀಪದ ಬಸಳೇಬೈಲಿನ ಶ್ರೀಕಾಂತ ಈಶ್ವರ ಚೋಗಲೆ (30)ಹಾಗೂ ಗಾಯಗೊಂಡ ವ್ಯಕ್ತಿಯನ್ನು ಕಿರಣ ನಾಗೇಶ ಬೋವಿವಡ್ಡರ್ ಗುರುತಿಸಲಾಗಿದೆ.
ಪಟ್ಟಣದ ಮುಂಡಗೋಡ ರಸ್ತೆಯ ಬಿ.ಎಸ್.ಎನ್.ಎಲ್. ಕಚೇರಿಯ ಹತ್ತಿರ ಈ ಘಟನೆ ನಡೆದಿದೆ. ಶ್ರೀಕಾಂತ ಚೋಗಲೆಯ ಪಲ್ಸರ್ ಬೈಕ್ ಹಾಗೂ ರವೀಂದ್ರನಗರದ ಕಿರಣ ನಾಗೇಶ ಬೋವಿವಡರ್ ಇವನ ಹೀರೋಹೋಂಡಾ ಬೈಕ್ ನಡುವೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಎರಡೂ ಬೈಕ್‍ಗಳೂ ಜಖಂಗೊಂಡಿವೆ. ಈ ಕುರಿತು ಪೋ ಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment