.
ಬೆಂಗಳೂರು : ಕೋವಿಡ್ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಂಟುAಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾರವನ್ನು ಒಂದು ಲಕ್ಷ.ರು. ನಿಂದ 1.50 ಲಕ್ಷ ರು.ಗೆ ಹೆಚ್ಚಳ ಮಾಡಲಗಿದೆ. ಇದೇ ವೇಳೆ ಬಿಪಿಎಲ್ಯೇತರ ಕುಟುಂಬಕ್ಕೆ 50 ಸಾವಿರ ರು.ಪರಿಹಾರವನ್ನು ಹೊಸದಾಗಿ ಘೋಷಿಸಿ ಆಧೇಶ ಹೊರಡಿಸಿದೆ.
ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ.ರು. ಮತ್ತು ಎಸ್ ಡಿ ಆರ್ ಎಫ್ ನಿಂದ 50 ಸಾವಿರ ರು. ಸೇರಿ 1.50 ಲಕ್ಷ. ರು ನೀಡಲಾಗುತ್ತಿದೆ.
ಬಿಪಿಎಲ್ ಕುಟುಂಬದ ಒಂದಕ್ಕಿAತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದರೆ. ಎಸ್ ಡಿ ಆರ್ ಎಫ್ ಅಡಿ ಮೃತ ಸಂಖ್ಯೆ ಅನುಗುಣವಾಗಿ ತಲಾ 50 ಸಾವಿರ ರು. ಪಾವತಿಸಲಾಗುತ್ತದೆ. ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ ಮತ್ತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ಅರ್ಜಿಸಲ್ಲಿಸಬಹುದು.
ವ್ಯಕ್ತಿಯ ರಾಜ್ಯದ ಯಾವುದೇ ಭಾಗದಲ್ಲಿ ಮೃತಪಟ್ಟಿದ್ದರೂ ಸಹ ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
Leave a Comment