ಹೊನ್ನಾವರ: ಗ್ರಾಮೀಣ ಭಾಗದ ಶಾಲೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಹಭಾಗಿತ್ವದಲ್ಲಿ ಶಾಲೆಯು ಅಭಿವೃದ್ಧಿಪಥದತ್ತ ದಾಪುಗಾಲಿಡುತ್ತಿರುವದು ಶ್ಲಾಘನೀಯ.ತಂತ್ರಜ್ಞಾನ ಸದ್ಬಳಕೆ ಮಾಡುವ ಮೂಲಕ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯ ಮಾದರಿ ಶಾಲೆಯಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ, ಮಂಗಳೂರು ಇದರ ನಿರ್ದೇಶಕ ಶಂಭುಲಿಂಗ .ಜಿ. ಹೆಗಡೆ ಹೇಳಿದರು.
ತಾಲೂಕಿನ ಯಲಕೊಟ್ಟಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ‘ಕ್ಯಾಂಪ್ಕೋ’ ಸಂಸ್ಥೆ ವತಿಯಿಂದ ನೀಡಿದ ‘ಸ್ಮಾರ್ಟ ಟಿ.ವಿ’ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದ ಯಾವುದೇ ಸಹಾಯಹಸ್ತವಿಲ್ಲದೇ ಸ್ವಯಂಸ್ಪೂರ್ತಿಯಿಂದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳ ಶಿಕ್ಷಣಕ್ಕಾಗಿ ಅನೂಕೂಲ ಮಾಡಿಕೊಟ್ಟ ಯಲಕೊಟ್ಟಿಗೆ ಗ್ರಾಮಸ್ಥರ ಸಾಮಾಜಿಕ ಪ್ರಜ್ಞೆ,ಕಳಕಳಿ ಶ್ಲಾಘನೀಯವಾದದು. ನಮ್ಮ ಸಂಸ್ಥೆಯ ವತಿಯಿಂದ ನೀಡುತ್ತಿರುವ ಕೊಡುಗೆಯಾದ ಸ್ಮಾರ್ಟ್ ಟಿವಿಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ನಂತರ ಆನ್ಲೈನ್ನಲ್ಲಿ ಹಾಜರಿದ್ದ ವಿದ್ಯಾರ್ಥಿಗಳೊಂದಿಗೆ ಮತ್ತು ಕೃಷಿಕ ಪಾಲಕರೊಂದಿಗೆ ಸಂವಾದ ನಡೆಸಿದರು.’ಕ್ಯಾಂಪ್ಕೋ’ ಬಲಾಡ್ಯ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ.ಪ್ರತಿವರ್ಷ ಆರುವರೆ ಲಕ್ಷ ಕ್ವಿಂಟಾಲ್ ಅಡಿಕೆ ಖರಿದಿ ಇದೆ.ಸಂಸ್ಥೆಯೊಂದಿಗೆ ವ್ಯವಹರಿಸುವ ರೈತರಿಗೆ ಎಲ್ಲಾ ರೀತಿಯ ಅನೂಕೂಲಕರ ವ್ಯವಸ್ಥೆ ನೀಡಲು ಸಿದ್ದರಿದ್ದೇವೆ ಎಂದು ಶಂಭುಲಿಂಗ ಹೆಗಡೆ ಭರವಸೆ ನೀಡಿದರು. ಕೆಲ ಕೃಷಿಕರು ಸಹ ನಿರ್ದೇಶಕರೊಂದಿಗೆ ಸಂಸ್ಥೆಯಲ್ಲಿನ ವ್ಯವಹಾರ ಹಾಗೂ ಕೃಷಿಕರಿಗಿರುವ ಸೌಲಭ್ಯಗಳ ಕುರಿತು ಸಂವಾದದಲ್ಲಿ ಪ್ರಶ್ನಿಸಿ ಉತ್ತರ ಪಡೆದರು.
ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗಡೆ, ,ಮ್ಯಾನೇಜರ್ ಭರತ್ ಭಟ್ ,ಸುನಿಲ್ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.ವೇದಿಕೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಿರಸಿ ವಲಯದ ಸಿನಿಯರ್ ಮ್ಯಾನೇಜರ್ ಭರತ್ ಭಟ್ ಕ್ಯಾಂಪ್ಕೋ ಸಂಸ್ಥೆಯ ಸುನಿಲ್ ಕುಮಾರ್ ಹೊನ್ನಾವರ, ಉಪ್ಪೋಣಿ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಗೌಡ, ಎಸ್.ಡಿ.ಎಮ್.ಸಿ ಅಧ್ಯಕ್ಷ ಕೇಶವ್ ಮರಾಠಿ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಸಿ ಸದಸ್ಯರು, ಶಿಕ್ಷಕ ವೃಂದ, ಪಾಲಕ-ಪೋಷಕರು, ಗ್ರಾಮಸ್ಥರು, ಪೂರ್ವ ವಿದ್ಯಾರ್ಥಿಗಳು, ಕೃಷಿಕರು ಹಾಜರಿದ್ದರು.
Leave a Comment