ಯಲ್ಲಾಪುರ: ಪಟ್ಟಣದ ಪ್ರಮುಖ ಮಸೀದಿಗಳಲ್ಲಿ ಒಂದಾದ ಗೌಸಿಯಾ ಮಸೀದಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿದ್ದು ಆಟೋ ಗುರುತಿನ ತಂಡ ಚಾವಿ ಗುರುತಿನ ತಂಡವನ್ನು ಸೋಲಿಸಿ ಜಯವನ್ನು ಸಾಧಿಸಿದೆ.
ಚುನಾವಣೆಗೆ ಎರಡು ಗುಂಪುಗಳಿAದ ೨೭ ನಾಮಪತ್ರಗಳು ಸಲ್ಲಿಕೆಯಾಗಿದ್ದು ೧೦ ನಾಮಪತ್ರಗಳನ್ನು ಹಿಂಪಡೆಯಲಾಗಿತ್ತು. ಒಟ್ಟು ಎರಡು ಗುಂಪುಗಳಿAದ ೧೭ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು ೧೧ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಆಟೋ ಗುರುತಿನಿಂದ ೧೧ ಅಭ್ಯರ್ಥಿಗಳು ಹಾಗೂ ಚಾವಿ ಗುರುತಿನಿಂದ ೬ ಅಭ್ಯರ್ಥಿಗಳು ಕಣದಲ್ಲಿದ್ದರು. ಗೌಸಿಯಾ ಮಸೀದಿಯಲ್ಲಿ ೨೧೪ ಜನ ಅಧಿಕೃತ ಸದಸ್ಯತ್ವ ಹೊಂದಿದ್ದು, ಅವುಗಳಲ್ಲಿ ೨೦೨ ಮತಗಳು ಚಲಾವಣೆಗೊಂಡಿತು. ಅವುಗಳಲ್ಲಿ ೭ ಮತಗಳು ತಿರಸ್ಕೃತಗೊಂಡು ಉಳಿದ ಮತಗಳಲ್ಲಿ ಆಟೋ ಗುರುತನ್ನು ಹೊಂದಿದ ತಂಡ ಅತ್ಯಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಅಬ್ದುಲ್ ಗಫಾರ್, ಅಬ್ದುಲ್ ಕರೀಂ ಶೇಖ್, ಅಬ್ದುಲ್ ಖಾದರ್, ಮಕ್ಸೂದ್ ಅಕ್ತರ್, ಮೊಹಮ್ಮದ್ ತಬ್ರೇಜ, ಸಲೀಂ ಸೈಯದ್, ಸಮೀರ್ ಅಹ್ಮದ್, ಸೈಯದ್ ಇಸ್ಮಾಯಿಲ್, ಸೈಯದ್ ಶಾಬಾಜ, ಶಬೀರ್ ಶೇಖ, ಶೇಖ್ ಜಹೀರ ವಿಜೇತ ಅಭ್ಯರ್ಥಿಗಳಾಗಿದ್ದಾರೆ.
ಬಹುದಿನಗಳಿಂದ ಚರ್ಚೆಯಲ್ಲಿದ್ದ, ಮಸೀದಿಯ ಆಡಳಿತ ಕಮಿಟಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರಿದ್ದ ಮಹ್ಮದ್ ಗೌಸ್ ನೇತ್ರತ್ವದ ತಂಡ ಜಯ ಸಾಧಿಸಿ, ಪಾರದರ್ಶಕ ಆಡಳಿತ ನೀಡುವುದಾಗಿ ತಿಳಿಸಿದೆ.
Leave a Comment