
ಯಲ್ಲಾಪುರ :ತಾಲೂಕಾ ಬಿಜೆಪಿ ಘಟಕ, ಹಾಸಣಗಿ ಮತ್ತು ಕಂಪ್ಲಿ ಶಕ್ತಿ ಕೇಂದ್ರದ ಸಹಯೋಗದೊಂದಿಗೆ ತಾಲೂಕಿನ ಮಂಚಿಕೇರಿ ಆರೋಗ್ಯ ಕೇಂದ್ರದಲ್ಲಿ ಸೇವೆ ಮತ್ತು ಸಮ ರ್ಪಣೆ ಯಡಿ ಗಾಂಧಿ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು. ಖ್ಯಾತ ವೈದ್ಯ ಜಿ.ಜಿ.ಹೆಗಡೆ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ರಕ್ತ ದಾನದ ಮಹತ್ವ ಹಾಗೂ ಈ ಕುರಿತು ಅರಿವು ಮೂಡಿಸಿದರು.
ವಾ.ಕ.ರಾ.ರ.ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆಯವರು ಸಂಘಟನೆ, ಸೇವೆ ಮತ್ತು ಸಮರ್ಪಣಾ ಅಭಿಯಾನದ ಕುರಿತಾಗಿ ಮಾತನಾಡಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಪ್ರಕೋಷ್ಠ ಸಂಚಾಲಕ ಗಣಪತಿ ಮಾನಿಗದ್ದೆ, ಓ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಾದಿಮನಿ, ಕಾರ್ಯಕ್ರಮಕ್ಕೆ ಸಹಕರಿಸಿದ ಡ್ಯಾನಿ ಡಿಸೋಜಾ ಉಪಸ್ಥಿತರಿದ್ದರು.
ತಾಲೂಕಾ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖ ರಾಘವೇಂದ್ರ ಭಟ್ಟ ಹಾಸಣಗಿ ಸ್ವಾಗತಿಸಿದರು. ರಘುಪತಿ ಹೆಗಡೆ ವಂದಿಸಿದರು. ವಿನೀಷ ಭಟ್ಟ ನಿರೂಪಿಸಿದರು.
ಈ ಶಿಬಿರದಲ್ಲಿ 30ಕ್ಕೂ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಜಿ ಪಂ ಮಾಜಿ ಸದಸ್ಯೆ ರೂಪಾ ಬೂರ್ಮನೆ, ತಾ ಪಂ ಮಾಜಿ ಸದಸ್ಯ ನಾಗರಾಜ ಕೌವಡಿಕೆರೆ, ಡಾ.ರವಿ ಭಟ್ಟ ಬರಗದ್ದೆ, ಪ್ರಸಾದ ಹೆಗಡೆ, ವಿನಾಯಕ ನಾಯ್ಕ, ಹಾಗೂ ಸ್ಥಳೀಯ ಮುಖಂಡರು ಇದ್ದರು. ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಹಕಾರ ನೀಡಿದರು.
Leave a Comment