ಶಿರಸಿ : ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ಸುರಕ್ಷತೆ ಖಾತ್ರಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಫಲನುಭವಿಗಳಾಗಲು ರೂಪಿಸಿರುವ ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಕಾರ್ಯ ಸಾಧ್ಯವಾಗುತ್ತಿಲ್ಲ.
ಇದಕ್ಕೆ ಆಗಸ್ಟ್ 26ರಂದು ಚಲನೆ ನೀಡಲಗಿದ್ದು, 16 ರಿಂದ 59 ವರ್ಷದೊಳಗಿನ ಎಲ್ಲ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಲು ಸಾಮನ್ಯ ಸೇವಾ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕಳೆದ 10-12 ದಿನಗಳಿಂದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿ ಆಗದೇ ಭಾರೀ ಸಮಸ್ಯೆ ಉಂಟಾಗಿರುವುದರಿAದ ದಯವಿಟ್ಟು ಸ್ವಲ್ಪ ಸಮಯ ಬಿಟ್ಟು ಪ್ರಯತ್ನಿಸಿ ಎಂಬ ಇಂಗ್ಲೀಷ್ ಸಂದೇಶವು ಕಂಪ್ಯೂಟರ್ ಸ್ಕಿçÃನ್ ಮೇಲೆ ಕಾಣಿಸಿಕೊಳ್ಳುತ್ತದೆ.
ಈ ಕುರಿತು ಸಾಮನ್ಯ ಸೇವಾ ಕೇಂದ್ರದವರು ದೂರಿದಾಗ ಇ-ಶ್ರಮ್ ಸರ್ವರ್ ಸಮಸ್ಯೆಗಳಿಗೆ ಕೆಲವು ಪರ್ಯಾಯಗಳೊಂದಿಗೆ ಬಂದಿದ್ದೇವೆ. ದಯವಿಟ್ಟು ಬೆಳ್ಳಗೆ 5 ರಿಂದ ಸಂಜೆ ಏಳು ಮತ್ತು ರಾತ್ರಿ 8 ರಿಂದ 10ರ ನಡುವೆ ಇ-ಶ್ರಮ್ ಕಾರ್ಡ್ಗಾಗಿ ಪ್ರಯತ್ನಿಸಿ, ದಯೆಯಿಂದ ಯೋಜನೆ ಮಾಡಿ ಎಂಬ ಸಂದೇಶ ಬರುತ್ತದೆ.
ಇದನ್ನೂ ಕಳುಹಿಸಿ ವಾರದ ಮೇಲಾಯಿತು. ಸಾಮನ್ಯ ಸೇವಾ ಕೇಂದ್ರ ( ಸಿಎಸ್ಸಿ) ದವರು ತಾವು ಕೆಲಸ ಮಾಡಿಕೊಡಲು ಸದ್ಧರಿದ್ದೇವೆ. ಆದರೆ ಪೋರ್ಟಲ್ ಸಮಸ್ಯೆ ಬಗೆಹರಿಯದೇ ಹೋದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಕಾರ್ಮಿಕರಿಗಾಗಿ
Leave a Comment