
ಯಲ್ಲಾಪುರ : :ಬುಡಕಟ್ಟು ಜನಾಂಗದ ವಿಕಾಸವು ಕೇವಲ ಬುಡಕಟ್ಟು ಕಲ್ಯಾಣ ಇಲಾಖೆ ಜವಾಬ್ದಾರಿ ಎಂಬ ಈ ವರೆಗಿನ ಅಭಿಪ್ರಾಯವನ್ನು ಮೀರಿ, ಸರ್ಕಾರದ ಅರಣ್ಯ, ಕಂದಾಯ, ಪಂಚಾಯತರಾಜ, ಹಣಕಾಸು, ಗ್ರಾಮೀಣಾಭಿವೃದ್ಧಿ, ಕೃಷಿ, ಸಹಕಾರಿ, ಶಿಕ್ಷಣ, ಆರೋಗ್ಯ, ಸಣ್ಣ ಕೈಗಾರಿಕಾ, ಇಂಧನ ಇಲಾಖೆ, ಮತ್ತು ಇನ್ನೂ ಅನೇಕ ಇಲಾಖೆಗಳು ಮತ್ತು ಖಾಸಗಿ ಕ್ಷೇತ್ರದ ಅನೇಕ ಸಂಘ ಸಂಸ್ಥೆಗಳು ಸೇರಿ ಒಗ್ಗಟ್ಟಿನ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಅವರು ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ , ರಾಷ್ಟ್ರೀಯ ಬುಡಕಟ್ಟು ಆಯೋಗವು ದೆಹಲಿಯಲ್ಲಿ ಆಯೋಗದ ಅಧ್ಯಕ್ಷ ಹರ್ಷ ಚವ್ಹಾಣ ನೇತ್ರತ್ವದಲ್ಲಿ ನಡೆಸಿದ ರಾಷ್ಟ್ರೀಯ ಸಂವಾದ ಕಾರ್ಯಕ್ರಮದಲ್ಲಿ ಬುಡಕಟ್ಟು ಜನರ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಕರ್ನಾಟಕದ ವಿಷಯ ಬಂದಾಗ ಇಲ್ಲಿಯ ಬುಡಕಟ್ಟುಗಳಿಗೆ ಅನುಸೂಚಿತ ಪಂಗಡ ಮತ್ತು ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ 2006 ರ ಅಡಿಯಲ್ಲಿ ಹಕ್ಕು ಪತ್ರ ನೀಡುವ ಪ್ರಕ್ರಿಯೆ ತುಂಬ ನಿಧಾನ ಗತಿಯಲ್ಲಿದೆ. ಈಗಾಗಲೇ ಹಲವು ರಾಜ್ಯಗಳು ಶೇ.70-80 ರಷ್ಟು ಸಾಧನೆ ಮಾಡಿದೆ.
ಆದರೆ ಕರ್ನಾಟಕದಲ್ಲಿ ಕಳೆದ 15 ವರ್ಷದಲ್ಲಿ ಕೇವಲ 25% ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಹಕ್ಕುಪತ್ರ ಸಿಗದೇ ಇರುವುದರಿಂದ ಬುಡಕಟ್ಟುಗಳ ಅನೇಕ ಅಭಿವೃದ್ಧಿ ಕೆಲಸ ಕುಂಟಿತ ಗೊಂಡಿದೆ. ಈ ಕುರಿತು ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆಯವರು ಸಸ್ಯಗಳು, ಜೀವವೈವಿಧ್ಯತೆ, ವನ್ಯಜೀವಿಗಳ0ತೆ, ಬುಡಕಟ್ಟು ಜನರನ್ನು ಅರಣ್ಯದ ಒಂದು ಭಾಗವಾಗಿ ಪರಿಗಣಿಸಿದರೆ ಮಾತ್ರ ಜನಾಂಗದ ಅಭಿವೃದ್ಧಿ ಹಾಗೂ ಅರಣ್ಯದ ಸಂರಕ್ಷಣೆ ಸಾಧ್ಯಅಂತೆಯೇ ಧನಗರ ಗೌಳಿ, ಕುಣಬಿ, ಹಾಲಕ್ಕಿ, ಒಕ್ಕಲಿಗ ಮುಂತಾದ ಪಾರಂಪರಿಕ ಅರಣ್ಯವಾಸಿಗಳು ಸುಮಾರು 100 ಕ್ಕಿಂತ ಹೆಚ್ಚು ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು ಅವರಿಗೂ ಮಾನವೀಯತೆಯ ದೃಷ್ಟಿಯಿಂದ ಹಕ್ಕುಪತ್ರ ನೀಡಬೇಕೆಂದು ಸರ್ಕಾರಕ್ಕೆ ಸೂಚಿಸಿವುದಾಗಿ ಹೇಳಿದರು.ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣ ಬೆಳಗಾವಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಬು ಪಾಟಿಲ್, ಸಿದ್ದಿ ಸಮುದಾಯದ ಪ್ರಮುಖ ಗೋಪಾಲ ಸಿದ್ದಿ, ಪ್ರಾಂತ ಹಿತರಕ್ಷಾ ಪ್ರಮುಖ ಹಾಗೂ ದನಗರ ಗೌಳಿ ಸಮಾಜದ ಪ್ರಮುಖ ದೊಂಡು ಪಾಟಿಲ್, ಹಾಲಕ್ಕಿ ಗೌಡ ಸಮಾಜದ ಪ್ರಮುಖರು ಹಾಗೂ ವನವಾಸಿ ಕಲ್ಯಾಣ ಕಾರವಾರ ಜಿಲ್ಲಾ ಸಮಿತಿ ಅಧ್ಯಕ್ಷ ಗಿರಿಯಾ ಗೌಡ, ಕುಣಬಿ ಸಮಾಜದ ಪ್ರಮುಖ ರಶ್ಮಾ ರಾಮನೆ ಕುಣಬಿ ಉಪಸ್ಥಿತರಿದ್ದರು.
Leave a Comment