ಹೊನ್ನಾವರ: ಮನುಷ್ಯನನ್ನು ಕಾಡುತ್ತಿರುವ ಹಲವಾರು ಖಾಯಿಲೆಗಳಿಗೆ ಇಂದಿನ ಆಹಾರ ಪದ್ದತಿಯೇ ಕಾರಣ. ಸಮಯಕ್ಕೆ ಸರಿಯಾಗಿ ಪೋ ಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಬೇಕು ಎಂದು ಆಯುರ್ವೇದ ತಜ್ಞೆ ಡಾ. ಪ್ರೀತಿ ಕುಲಕರ್ಣಿ ಹೇಳಿದರು.
ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ ರಾಷ್ಟ್ರೀಯ ಪೋಷಣಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಮನಸ್ಸು ಮತ್ತು ಶರೀರ ಸ್ವಸ್ಥವಾಗಿರಲು ಪೆÇೀಷಕಾಂಶಗಳನ್ನು ಒಳಗೊಂಡಿರುವ ಆಹಾರದ ಅವಶ್ಯಕತೆಯಿದೆ. ನಮ್ಮ ದೇಹದ ಪ್ರತಿಯೊಂದು ಅಂಗಾಗಗಳಿಗೂ ಪೂರಕವಾದ ಆಹಾರ ಸೇವಿಸಬೇಕು ಎಂದರು.

ಬಿಆರ್ಸಿ ಸಮನ್ವಯಾಧಿಕಾರಿ ಎಸ್.ಎಂ.ಹೆಗಡೆ ಮಾತನಾಡಿ ಬೆಳೆಯುವ ಮಕ್ಕಳು ಪೋಷಕಾಂಶಯುಕ್ತ ಆಹಾರದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಬೇಕು. ಸಮತೋಲನ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವಂತರಾಗಬೇಕು. ನಮ್ಮ ದೇಹಕ್ಕೆ ಎಲ್ಲ ಬಗೆಯ ಆಹಾರ ಪದಾರ್ಥಗಳು ಬೇಕು. ಅದು ಪೆÇೀಷಕಾಂಶಗಳನ್ನು ಒಳಗೊಂಡಿರಬೇಕು. ರಾಷ್ಟ್ರೀಯ ಪೋಷಣಾ ಅಭಿಯಾನವು ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಮಾರುತಿ ನಾಯ್ಕ, ಸಿಆರ್ಪಿ ಸುಜಾತಾ ನಾಯ್ಕ, ಮುಖ್ಯಾಧ್ಯಾಪಕಿ ವೀಣಾ ಶಾನಭಾಗ, ಸಹಶಿಕ್ಷಕರಾದ ವಿಜಯಾ ಶೇಟ್, ಕಲ್ಪನಾ ಹೆಗಡೆ, ಸಾವಿತ್ರಿ ಭಟ್, ಸುಲೋಚನಾ ನಾಯ್ಕ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಆಹಾರಧಾನ್ಯ ಮತ್ತು ತರಕಾರಿಗಳಿಂದ ರಚಿಸಿದ ಬಗೆಬಗೆಯ ಚಿತ್ತಾರಗಳು ಜನಮನ ಸೆಳೆದವು.
Leave a Comment