
ಯಲ್ಲಾಪುರ : ನಮ್ಮ ತರಬೇತಿ ಕೇಂದ್ರದಿAದ ಮೂವರು ವಿದ್ಯಾರ್ಥಿಗಳು ಈ ಬಾರಿಯ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅಧಿಕ ಅಂಕಗಳೊAದಿಗೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ನಮ್ಮ ಪರಿಶ್ರಮ ಹಾಗೂ ಅವರ ಕಲಿಕೆಯ ಇಚ್ಛಾಶಕ್ತಿಯ ಬಲವನ್ನು ಸಾಬೀತುಪಡಿಸುತ್ತದೆ ಎಂದು ಯೋಗಿ ಟಾಪರ್ಸ್ ಪಾಯಿಂಟ್ ಮುಖ್ಯಸ್ಥ ಯೋಗೇಶ್ ಶ್ಯಾನಭಾಗ್ ಹೇಳಿದರು.
ತಮ್ಮ ತರಬೇತಿ ಕೇಂದ್ರದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಯಲ್ಲಾಪುರದ ವಿದ್ಯಾರ್ಥಿಗಳು ಉತ್ತಮ ತರಬೇತಿಗಾಗಿ ಪರಊರಿಗೆ ತೆರಳುವ ಅನಿವಾರ್ಯತೆಯಿತ್ತು. ಇದರಿಂದ ಅಪಾರ ಹಣ ಹಾಗೂ ಸಮಯ ವ್ಯರ್ಥ ವಾಗುತ್ತಿತ್ತು. ಈ ನಿಟ್ಟಿನಲ್ಲಿ ೩ ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಯಲ್ಲಾಪುರದ ಜನತೆಗೆ ಕೈಗೆಟಕುವ ದರದಲ್ಲಿ ಯೋಗಿ ಟಾಪರ್ಸ ತರಬೇತಿ ಕೇಂದ್ರ ಪ್ರಾರಂಭಿಸಿದೆವು. ನಂತರ ಪಿ.ಯು.ಸಿ. ವಿದ್ಯಾರ್ಥಿಗಳಿಗೂ ಸಹ ತರಗತಿ ಪ್ರಾರಂಭವಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ ೨೦೧೯-೨೦ ನೇ ಸಾಲಿಗೆ ಪ್ರಪ್ರಥಮವಾಗಿ ನವೋದಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಲಿಗೆಂದು ವಿಶೇಷ ತರಬೇತಿಯನ್ನು ಪ್ರಾರಂಭಿಸಿದೆ.
ಮೊದಲನೇ ವರುಷವೇ ಓರ್ವ ವಿದ್ಯಾರ್ಥಿ ಉತ್ತೀರ್ಣನಾಗಿದ್ದು ನಮ್ಮ ಮನೋಬಲವನ್ನು ಹೆಚ್ಚಿಸಿತು. ಅಂತೆಯೇ ಈ ಬಾರಿ ೪೦ ವಿದ್ಯಾರ್ಥಿಗಳ ತರಭೇತಿ ಪಡೆದಿದ್ದರು. ಯಲ್ಲಾಪುರಕ್ಕೆ ೪ ಸೀಟ್ ಇತ್ತು ಅವರಲ್ಲಿ ೩ ವಿದ್ಯಾರ್ಥಿಗಳು ನಮ್ಮ ಕೇಂದ್ರದವರಾಗಿದ್ದಾರೆ. ಮೂವರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು. ಸಾಧಕ ವಿದ್ಯಾರ್ಥಿಗಳಾದ
ತನುಶ್ರೀ ಗಂಗಾಧರ ಪಮ್ಮಾರ , ಸೃಷ್ಟಿ ಉದಯ ದೇವಕರ್ ಹಾಗೂ ದಿಶಾ ರವಿದಾಸ ರೇವಣಕರ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳ ಪಾಲಕರು ಇದ್ದರು.
Leave a Comment