• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಶ್ಮೀರದಲ್ಲಿ ಉಗ್ರರಿಂದ ಶಿಕ್ಷಕರ ಕಗ್ಗೊಲೆ

October 8, 2021 by Deepika Leave a Comment

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿರಿಸಿಕೊಂಡು ನಡೆದಿರುವ ದಾಳಿ ಮುಂದುವರೆದಿದ್ದು, ಗುರುವಾರ ಪ್ರಾಂಶುಪಾಲೆ ಸೇರಿದಂತೆ ಇಬ್ಬರು ಶಿಕ್ಷಕರನ್ನು ಭಯೋತ್ಪಾದಕರು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.

ಕಳೆದ ಐದು ದಿನಗಳಲ್ಲಿ ಏಳು ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಘಟನೆ ಬೆನ್ನೆಲ್ಲೇ ಕಣಿವೆ ರಾಜ್ಯದಲ್ಲಿ ಪ್ರತಿಭಟನೆ ವ್ಯಾಪಕಗೊಂಡಿದ್ದು, ಉಗ್ರರನ್ನು ಬೇಟೆಯಾಡುವುದಾಗಿ ಕಾಶ್ಮೀರ ಪೊಲೀದರು ಘೋಷಿಸಿದ್ದಾರೆ.

ಕಾಶ್ಮೀರಕ್ಕೆ ನೀಡಿದ್ದ ವಶೇಷ ಸ್ಥಾನಮಾನ ತೆಗೆದುಹಾಕಿ ರಾಜ್ಯವನ್ನು ಪಂಡಿತರು ಸೇರಿದಂತೆ ಮುಸ್ಲಿಮೇತರರಿಗೆ ಕೇಂದ್ರ ಸರ್ಕಾರ ಮುಕ್ತಗೊಳಿಸಿದ ನಂತರ ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ಮಂಗಳವಾರಷ್ಟೇ ವ್ಯಾಪಾರಿ ಮಖನ್ ಲಾಲ್ ಬಿಂದ್ರೂ, ಬೀದಿ ವ್ಯಾಪಾರಿ ವೀರೇದ್ರ ಪಾಸ್ವಾನ್ ಸೇರಿದಂತೆ ಮೂವರನ್ನು ಶ್ರೀನಗರ ಲಾಲ್ ಚೌಕ ಪ್ರದೇಶದಲ್ಲಿ ಉಗ್ರರು ಹತ್ಯೆಗೈದಿದ್ದರು.

ಈ ಘಟನೆ ನಡೆದ 48 ಗಂಟೆಯಲ್ಲೇ ಮತ್ತಿಬ್ಬರನ್ನು ಬಲಿತೆಗೆದುಕೊಂಡು ಘಡನೆಯಿಂದಾಗಿ ಹಿಂದುಗಳಲ್ಲಿ ಆತಂಕ ಭಯ ಹೆಚ್ಚಾಗಿದೆ. ಶ್ರೀನಗರದ ಸಂಗA ಈದ್ಗಾ ಪ್ರದೇಶದ ಸರ್ಕಾರಿ ಬಾಲಕರ ಶಾಲೆಗೆ ಗುರುವಾರ ಬೆಳ್ಳಿಗೆ ನುಗ್ಗಿದ ಇಬ್ಬರು ಶಸ್ತçಧಾರಿ ಉಗ್ರರು ಎಲ್ಲ ಶಿಕ್ಷಕರು ಗುರುತಿನ ಚೀಟಿ ತೋರಿಸುಂತೆ ಸೂಚಿಸಿದರು.

ನಂತರ ಶಿಕ್ಷಕರ ಗುಂಪಿನಿAದ ಮುಸ್ಲಿಮರನ್ನು ಪ್ರತ್ಯೇಕಿಸಿ, ಸಿಖ್ ಸಮುದಾಯಕ್ಕೆ ಸೇರಿದ ಪ್ರಾಂಶುಪಾಲೆ ಸುಪ್ರೀಂ ಶ್ರೀನಗರದಲ್ಲಿ ಉಗ್ರರ ಇಬ್ಬರು ಶಿಕ್ಷಕರನ್ನು ಗುಂಡಿಟ್ಟು ಕೊಂದಿರುವುದಕ್ಕೆ ವ್ಯಾಪಕ ಪ್ರತಿಭಟನೆ ನಡೆಸಲಾಯಿತು

ದರ್ ಕೌರ್ ಮತ್ತು ಹಿಂದು ಸಮುದಾಯದ ಶಿಕ್ಷಕ ದೀಪಕ್ ಚೌಂದ್ ಅವರನ್ನು ಶಾಲೆಯಿಂದ ಹೊರಗೆಳೆದ ಉಗ್ರರು, ಗುಂಡಿಕ್ಕಿ ಕೊಂದು ಪರಾರಿಯಾದರು. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್, ನೊಂದ ಕುಂಟುAಬಗಳಿಗೆ ಸಾಂತ್ವನ ಹೇಳಿ, ಭದ್ರತಾ ಪರಿಸ್ಥಿತಿ ಪಾರಾಮರ್ಶೆ ನಡೆಸಿದರು.

ಪಾಕಿಸ್ತಾನದ ನರ್ದೇಶನದ ಮೇರೆಗೆ ಉಗ್ರರು ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ದಾಳಿ ತೀವ್ರಗೊಳಿಸಿದ್ದಾರೆ ಎಂದು ಖಂಡಿಸಿದರು. ಅಮಾಯಕರ ಬಲಿದಾನ ವ್ಯರ್ಥವಾಗಲು ಪೊಲೀಸರು ಬಿಡುವುದಿಲ್ಲ. ಈ ಸಾವು-ನೋವಿನ ಕಾರಣರಾದ ಉಗ್ರರನ್ನು ಬೇಟೆಯಾಡುವುದಾಗಿ ಅವರು ಎಚ್ಚರಿಕೆ ಕೊಟ್ಟರು.

ಶಾಲೆಯಿಂದ ಹೊರಗೆಳೆದು ಗುಂಡಿಕ್ಕಿದ ಉಗ್ರರು ದಾಳಿಯ ಹೊಣೆ ಹೊತ್ತ ಪಾಕ್ ಮೂಲದ ಲಷ್ಕರ್ ಬಣ ಇಡೀ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈ ಹತ್ಯೆ ಉ ಹೊಣೆಯನ್ನು ಪಾಕ್ ಮೂಲದ ಲಷ್ಕರ್ -ಇ-ತೋಯ್ಬಾದ ಬಣ -ಟಿಆರ್‌ಎಫ್ ಹೊತ್ತುಕೊಂಡಿದೆ.

ಘಟನೆಯನ್ನು ಖಂಡಿಸಿರುವ ಉಪರಾಜ್ಯ ಪಾಲ ಮನೋಜ್ ಸಿನ್ಹಾ ಉಗ್ರರು ಮತ್ತು ಅವರ ಪೋಷಕರು ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಲು, ರಾಜ್ಯದ ಪ್ರಗತಿ ಮತ್ತು ಸೌಹಾರ್ದತೆಯನ್ನು ತಡೆಯಲು ಸಾಧ್ಯ ವಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಘಟನೆಗೆ ಅಘಾತ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ. ಕಾಶ್ಮೀರ ಭದ್ರತೆ ಕುರಿತಂತೆ ಉನ್ನತ್ ಸಭೆ ನಡೆಸಿದ್ದಾರೆ.

ಈ ಮಧ್ಯೆ ಬಿಜೆಪಿ ನ್ಯಾಷನಲ್ ಕಾನ್ಫರೆನ್ನ್ ಸೇರಿದಂತೆ ಎಲ್ಲ ಪಕ್ಷಗಳು ಈ ಬರ್ಬರ ಘಟನೆಯನ್ನು ಖಂಡಿಸಿವೆ. ರಾಜ್ಯದಲ್ಲಿ ಅಮಾಯಕರು ಹಿಂಸೆಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ತನ್ನ ನಿಲುವುಗಳನ್ನು ಮರುಪರಿಶೀಲಿಸಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ, ಜಮ್ಮು ಹಾಗೂ ಇತರಡೆ ಬಿಜೆಪಿ ಮತ್ತು ಹಿಂದು ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದು, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗೃಹ ಸಾಲದ ಬಡ್ಡಿ ಇಳಿಕೆ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, National News Tagged With: ಈ ಘಟನೆ ನಡೆದ 48 ಗಂಟೆಯಲ್ಲೇ ಮತ್ತಿಬ್ಬರನ್ನು ಬಲಿ, ಏಳು ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ, ಜಮ್ಮು ಕಾಶ್ಮೀರ, ನ್ಯಾಷನಲ್ ಕಾನ್ಫರೆನ್ನ್

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar