ಹೊನ್ನಾವರ: ಬಡ ಡಯಾಲಿಸಿಸ್ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಸೋಮವಾರದಿಂದ ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇರ್ವರು ಶಾಸಕರ ವ್ಯಾಪ್ತಿಗೆ ಬರುವ ಹೊನ್ನಾವರ ತಾಲೂಕ ಸರಕಾರಿ ಆಸ್ಪತ್ರೆಗೆ ಇಸ್ಪೋಸಿಸ್ ನೆರವಿನ ಬಳಿಕ ಸುಸಜ್ಜೀತ ಕಟ್ಟಡ ನಿರ್ಮಾಣವಾಗಿ ಜಿಲ್ಲೆಯಲ್ಲಿಯೇ ಉತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. 2018ರ ಜನವರಿ 9 ರಂದು ಆರಂಭಗೊಂಡಿತ್ತು. ಆರಂಭದಲ್ಲಿ ಒಂದು ಯಂತ್ರದಿಂದ ಆರಂಭವಾಗಿ ಇದೀಗ ನಾಲ್ಕು ಡಯಾಲಿಸಿಸ್ ಘಟಕದಲ್ಲಿ ಮೂರು ಕಾರ್ಯನಿರ್ವಹಿಸುತ್ತಿತ್ತು.

ಕೋವಿಡ್ ಸಮಯದಲ್ಲಿಯೂ ಉತ್ತಮ ಸೇವೆಯ ಮೂಲಕ ಈ ಘಟಕ ನೆರವಾಗುತ್ತಿತ್ತು. ಇದರ ನಿರ್ವಹಣೆ ಮಾಡುತ್ತಿದ್ದ ಬಿ.ಆರ್.ಶೆಟ್ಟಿ ಕಂಪನಿಗೆ ಸರ್ಕಾರದಿಂದ ಪಾವತಿಯಾಗಬೇಕಿದ್ದ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಇದರ ನಿರ್ವಹಣೆ ಹಾಗೂ ಸಿಬ್ಬಂದಿ ವೇತನ ನೀಡಿರಲಿಲ್ಲ. ಈ ವರ್ಷ ಕೋವಿಡ್ ಮಧ್ಯೆ ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ವೇತನವಿಲ್ಲದೇ ಕಾರ್ಯನಿರ್ವಹಿಸಿದ್ದರು.
ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ನಿರ್ವಹಣೆಗೆ ಹಣ ನೀಡಿ ಸಹಾಯಹಸ್ತದ ಪ ರಿಣಾಮವಾಗಿ ಬಡ ರೋಗಿಗಳಿಗೆ ಸಮಸ್ಯೆಯಾಗಿರಲಿಲ್ಲ. ಆದರೆ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸತತ ಮೂರು ತಿಂಗಳ ಕಾಲ ವೇತನ ಪಾವತಿಯಾಗದೇ ಸಮಸ್ಯೆ ಎದುರಿಸಿದ್ದರು. ಸಂಭದಿಸಿದ ಇರ್ವರು ಶಾಸಕರು ಅಧಿಕಾರಿಗಳು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳು ಆರು ಸಾವಿರ ಹಣವನ್ನು ಶಾಸಕ ದಿನಕರ ಶೆಟ್ಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾ ಹೋದರು. ಹಲವಾರು ಬಾರಿ ಮನವಿ ಮಾಡಿಕೊಂಡರು ಕೇವಲ ಬಾಯಿ ಮಾತಿನ ಭರವಸೆ ಆಗುತ್ತಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ ಇನ್ನೂ ಮುಂದೆ ನಮ್ಮಿಂದ ಸಾಧ್ಯವಿಲ್ಲ, ಸಂಬಳವಿಲ್ಲದೆ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಸಿಬ್ಬಂದಿಗಳು ಸೋಮವಾರ ನಾವು ಡಯಾಲಿಸಿಸ್ ಘಟಕ ಬಂದ್ ಮಾಡುತ್ತೇವೆ ಎಂದು ಸರಕಾರಿ ಆಸ್ಪತ್ರೆಯ ಆಡಳಿತಧಿಕಾರಿಗಳಿಗೆ ಸಿಬ್ಬಂದಿಗಳು ಶುಕ್ರವಾರ ಮನವಿ ನೀಡಿದ್ದಾರೆ.
ನಮಗೆ ಬಿ. ಆರ್. ಎಸ್ ಕಂಪನಿ ನೀಡುವಷ್ಟೇ ಸಂಬಳ ನಾಳೆಯೇ ನೀಡಿದರೆ ಮುಂದುವರಿಯುತ್ತೇವೆ. ಸಂಬಳ ನೀಡದೆ ಇದ್ದರೆ ಸೋಮವಾರ ಹೊನ್ನಾವರ ಘಟಕ ಬಂದ್ ಮಾಡಿ ಕಾರವಾರದಲ್ಲಿ ಜಿಲ್ಲೆಯ ಎಲ್ಲಾ ನೌಕರರು ಸೇರಿ ಮುಸ್ಕರ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಹೊನ್ನಾವರ ತಾಲೂಕಿನಲ್ಲಿ ಅಂದಾಜು 29 ಡಯಾಲಿಸಿಸ್ ಚಿಕಿತ್ಸೆ ಪಡೆಯುವ ರೋಗಿಗಳಿದ್ದು, ಡಯಾಲಿಸಿಸ್ ಘಟಕ ಬಂದಾದರೆ ಈ ರೋಗಿಗಳಿಗೆ ತುಂಬಾ ಸಮಸ್ಯೆಯಾಗಲಿದೆ. ಸಿಬ್ಬಂದಿಗಳಿಗೆ 6 ತಿಂಗಳುಗಳ ಕಾಲ ಸಮರ್ಪಕ ವೇತನ ಮತ್ತು ಭತ್ಯೆ ಸಿಗದ ಕಾರಣ ರಾಜಿನಾಮೆ ನೀಡುತ್ತಿದ್ದೇವೆ. ಇದೇ ರೀತಿ ಮುಂದುವರಿದಲ್ಲಿ ಡಯಾಲಿಸಿಸ್ ಘಟಕವನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ. ಅಥವಾ ಸಿಬ್ಬಂದಿಗಳ ಕೊರತೆಯಾದಲ್ಲಿ ಡಯಾಲಿಸಿಸ್ ಮಾಡುವುದು ಕಷ್ಟವಾಗುತ್ತದೆ, ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸುವ ಮೂಲಕ ಡಯಾಲಿಸಿಸ್ ರೋಗಿಗಳಿಗೆ ನೆರವಾಗಬೇಕಿದೆ.
Leave a Comment