ಯಲ್ಲಾಮರ : ವಿವಿಧ ದೇವಿ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಉತ್ಸವವು ಸಂಭ್ರಮ ಸಡಗರದಿಂದ ದಿಂದ ಆರಂಭವಾಗಿದೆ. ಪಟ್ಟಣದ ಗ್ರಾಮದೇವಿ ದೇವಾಲಯ,ಕಾಳಮ್ಮ ನಗರದ ಕಾಳಮ್ಮ ದೇವಸ್ಥಾನ,ಕೋಟೆ ಕರಿಯವ್ವ ದೇವಸ್ಥಾನ,ನಾಯಕನಕೆರೆ ಶಾರದಾಂಬಾ ದೇವಾಲಯ,
ಕವಡಿಕೆರೆ ದುರ್ಗಾಂಬಾ ದೇವಾಲಯ, ಮುಂತಾದ ದೇವಾಲಯಗಳಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಸಪ್ತಶತಿ ಪಾರಾಯಣ,ಕುಂಕುಮಾರ್ಚನೆ, ಉಡಿಸೇವೆ ಮುಂತಾದವು ಗಳು ನಡೆಯುತ್ತಿದ್ದು, ಭಕ್ತರು ಶ್ರದ್ಧಾ-ಭಕ್ತಿಯಿಂದ ಶ್ರೀದೇವರ ದರ್ಶನ
ಪಡೆಯುತ್ತಿದ್ದಾರೆ.
ಈ ಬಾರಿಯ ನವರಾತ್ರಿ ಉತ್ಸವವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದು, ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲದ್ದರಿಂದ ಆಯೋಜನೆಗೊಂಡಿಲ್ಲ
, ನಿತ್ಯ ದೇವಿ ಪಾರಾಯಣ, ಚತುರ್ವೇದ ಪಾರಾಯಣ, ಶ್ರೀದೇವರಿಗೆ ಅಭಿಷೇಕ,ವಿವಿಧ ಅಲಂಕಾರ ಹಾಗೂ ಮಹಾನೈವೇದ್ಯ ನಡೆಯುತ್ತಿದೆ. ಪಟ್ಟಣದ ದೇವಿ ದೇಗುಲಗಳೆಲ್ಲವೂ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
Leave a Comment