
ಯಲ್ಲಾಪುರ: ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಪಟ್ಟಣದ ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ವ್ಯಕ್ತಿಯನ್ನು ನೂತನನಗರ ಜಡ್ಡಿಯ ಜಮಾಲ್ ಸಾಬ್ ಅಮೀರಸಾಬ ಬೇಪಾರಿ (55) ಎಂದು ಗುರುತಿಸಲಾಗಿದೆ. ಸಾಲ ಹೆಚ್ಚಾದ ಕಾರಣಕ್ಕಾಗಿ ಕುಡಿಯುವ ಚಟ ರೂಢಿಸಿಕೊಂಡಿದ್ದ ಈತ, ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದ. ಎಷ್ಟೇ ಔಷಧೋಪಚಾರ ಮಾಡಿದರೂ ವಾಸಿಯಾಗದೇ ಇರುವುದರಿಂದ ನೊಂದು ಮನೆಯಿಂದ ಹೊರಹೋಗಿದ್ದು, ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಪೆÇಲೀಸರು ಹಾಗೂ ಅಗ್ನಿಶಾಮಕ ದಳದವರು ಶವವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a Comment