
ಯಲ್ಲಾಪುರ: ತಾಲ್ಲೂಕಿನ ಬೊಂಬಡಿಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೊರ್ವನಿಗೆ ಹಾವೊಂದು ಮೂತ್ರ ವಿಸರ್ಜಿಸುವ ಜಾಗಕ್ಕೆ ಕಚ್ಚಿದ್ದು, ಚಿಕಿತ್ಸೆಗಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.
ತಾಲ್ಲೂಕಿನ ಬೊಂಬಡಿ ಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೋರ್ವನು ಬಯಲಲ್ಲಿ ಕುಳಿತಿರುವಾಗ ಹುಲ್ಲಿನ ಮದ್ಯದಲ್ಲಿದ್ದ ಹಾವೊಂದು ಮರ್ಮಾನಂಗಕ್ಕೆ ಕಚ್ಚಿದ್ದು, ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದರು.
ಚಿಕಿತ್ಸೆ ನೀಡಿದ ವೈದ್ಯರು ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ
ಕಿಮ್ಸ್‌ಗೆ ಸೂಚಿಸಿದ್ದಾರೆ, ನಡೆದ ಘಟನೆ ಲಘುವಾಗಿ ಪರಿಗಣಿಸದೆ ವಿಷಯದ ಗಂಭೀರತೆ ಅರಿಯಬೇಕಿದೆ.ಬಯಲು ಶೌಚದ ದುಷ್ಪರಿಣಾಮ ಗಳಲ್ಲಿ ಒಂದಾಗಿದೆ.
ಹಲವು ಕಾರಣಗಳಿಗೆ ಬಯಲು ಶೌಚ ಅಪಾಯಕಾರಿಯಾಗಿದ್ದು ಇಂತಹ ಘಟನೆಗಳು ಅದಕ್ಕೆ ಪುಷ್ಟಿ ನೀಡುತ್ತದೆ. ಸಾರ್ವಜನಿಕರು ಬಹಳ ಸೂಕ್ಷ್ಮವಾಗಿ ಅರಿತು ನಡೆಯಬೇಕಿದೆ ಅದರಲ್ಲೂ ಪುಟ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.ಎಂದು ಆಸ್ಪತ್ರೆಯ ವೈದ್ಯರು ಹೇಳಿದರು.
Leave a Comment