ಯಲ್ಲಾಪುರ – ವಿದ್ಯನ್ಮಾನ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಜಾಪ್ರಭುತ್ವದ ಮಹತ್ವದ ಭಾಗವಾಗಿರುವ ಚುನಾವಣೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ವಿನೂತನ ಚುನಾವಣಾ ಮಾಹಿತಿಯನ್ನು EVM ಮತ ಯಂತ್ರದ ಮಾದರಿಯ ಮೂಲಕ ಚುನಾವಣಾ ಅರಿವು ಕಾರ್ಯಕ್ರಮವನ್ನು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆಯಿತು .
ತಂತ್ರಜ್ಞಾನವನ್ನು ಬಳಸಿ, ಮಕ್ಕಳಿಗೆ ತಿಳುವಳಿಕೆ ನೀಡಿ ಶಾಲಾ ಸಂಸತ್ತಿನ ಆಯ್ಕೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ವೆಂಕಟ್ರಮಣ ಭಟ್ಟ, ಎಂ.ರಾಜಶೇಖರ, ನೆಲ್ಸನ್ ಗೊನ್ಸಾಲ್ವಿಸ್, ಪ್ಲೆಂಕಿ ಆಲ್ಪಾನ್ಸೊ, ಮಿಸ್ ಮೀಲಾ ನಿರ್ವಹಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯಾಧ್ಯಾಪಕ ಫಾ||ರೇಮಂಡ್ ಫರ್ನಾಂಡಿಸ್ ಕಾರ್ಯನಿರ್ವಹಿಸಿದರು. ಚುನಾವಣಾ ಅರಿವು ಕ್ಲಬ್ ನ ಶಿಕ್ಷಕರಾದ ಜಗದೀಶ ಭಟ್ಟ ಹಾಗೂ ಚಂದ್ರಶೇಖರ ಎಸ್.ಸಿ. ಕಾರ್ಯನಿರ್ವಹಿಸಿದರು.
ಶಾಲಾ ಸಂಸತ್ತಿಗೆ
ಶ್ರೇಯಾ ರವಿ ಕೈಟಕರ ಪ್ರತಿಭಾ ಮಂಗಲಚಂದ್ರ ಪಂಡರಪುರಅಯಾನ ಇಸ್ಮಾಯಿಲ್ ಶೇಖ್ ಉಜಮಾ ಗಫಾರಸಾಬ ತಾಂಬೊಳಿ
ಶ್ವೇತಾ ತಿರುಪಾಲ ಮಾದರ ಪ್ರಜ್ವಲ್ ಶ್ರೀನಿವಾಸ್ ಹೊನ್ನೆಗೌಡ,ದಿಕ್ಷಿತ ನೀಲಕಂಠ ಭೋವಿವಡ್ಡರ ಪ್ರಥಮ ವಿನಾಯಕ ಪೂಜಾರಿ ಈ ಎಲ್ಲ ವಿದ್ಯಾರ್ಥಿಗಳು ಆಯ್ಕೆಯಾದರು.
Leave a Comment