
ಯಲ್ಲಾಪುರ:ಸಾತೊಡ್ಡಿ ಜಲಪಾತದ ಸುತ್ತಮುತ್ತಲಿನ ಭಾಗದಲ್ಲಿ ಭಾರಿ ಮಳೆ ಸುರಿದು ಸಾತೊಡ್ಡಿ ಪ್ರದೇಶದಲ್ಲಿ ಜಲಪಾತದಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಭಾನುವಾರ ಜಲಪಾತಕ್ಕೆ ಬಂದ ಪ್ರವಾಸಿಗರು ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ
ಅಪಾಯವಿಲ್ಲದೆ ಪಾರಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಹುಬ್ಬಳ್ಳಿ ಕಡೆಯಿಂದ 10 ಪ್ರವಾಸಿಗರು ಜಲಪಾತ ನೋಡಲು ಬಂದು ನೀರು ಕಡಿಮೆ ಇದ್ದು ನಡೆದು ಮುಂದೆ ಹೋಗಿ ಇನ್ನೊಂದು ಬದಿಯ ದಡ ಸೇರಿದ್ದಾರೆ. ಆದರೆ ಮಳೆಯಿಂದ ಒಮ್ಮೆಗೆ ನೀರು ಹರಿದು ಬಂದಿತ್ತು.ಇದರಿಂದ ಅಲ್ಲಿಯೇ ಸಿಲುಕಿ ಹಿಂತಿರುಗಿ ಬರಲು ಪರದಾಡುವಂತಗಿತ್ತು.
ವಿಷಯ ತಿಳಿದು ಗ್ರಾಮ ಅರಣ್ಯ ಸಮಿತಿ ಅಧ್ಯಮಧ್ಯಾಹ್ನಕ್ಷ ನಾರಾಯಣ ಭಟ್ಟ ಕಂಚಿನ ಗದ್ದೆ ತಮ್ಮಶಿವರಾಮ ಮಹಾಲೆ, ಶ್ರೀಧರ ಮಹಾಲೆ, ರಾಘವೇಂದ್ರ ಕುಂಬ್ರಾಳ ಹಾಗೂ ತಂಡ ತಲುಪಿದ್ದರು ಮಳೆ ಕಡಿಮೆಯಾಗುತ್ತಿದ್ದಂತೆ ನೀರಿನ ಹರಿವು ಕಮ್ಮಿಯಾಗಿ ಪ್ರವಾಸಿಗರು ಕಷ್ಟಪಟ್ಟು ಈಚೆ ದಡ ಸೇರಿದ್ದಾರೆ.



shri devaki krishna wash point, karki naka ,honavar ,contact; sachin mesta 9538529046,8310014860
Leave a Comment