
ಯಲ್ಲಾಪುರ: ಗ್ರಾಮೀಣ ಪ್ರದೇಶವಾದ ಶಿರನಾಲಾದಲ್ಲಿ ಬಾನ್ಸುರಿ ಶಿಕ್ಷಣ ನೀಡುತ್ತಿರುವ ಗುರುಕುಲದ ಶ್ರದ್ಧಾಪೂರ್ವಕ, ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ.ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.

ಅವರು ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಶಿರನಾಲಾದ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಧುನಿಕತೆಯ ಭರಾಟೆಯ ನಡುವೆ
ಬದಲಾಗುತ್ತಿರುವ ಇಂದಿನ ಜನ, ತಮ್ಮಜೀವನಶೈಲಿಯಲ್ಲಿ ಇತರ ಮನರಂಜನೆಗೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ಕಲೆ ಮತ್ತು ಸಾಹಿತ್ಯಗಳಿಗೆನೀಡದಿರುವುದು ಬೇಸರದ
ಸಂಗತಿ. ಮಾನಸಿಕ ನೆಮ್ಮದಿ ನೀಡುವ ಸಂಗೀತ ದಂತಹ ಸಂಘಟನೆಯನ್ನು ಸಮಸ್ತ ಜನಸಮುದಾಯ ಪ್ರೋತ್ಸಾಹಿಸಿ, ಬೆಂಬಲಿಸಬೇಕು ಎಂದರು.
ಗುರುಕುಲ ಟ್ರಸ್ಟ್ ಅಧ್ಯಕ್ಷ, ಬಾನ್ಸುರಿ ಕಲಾವಿದ, ಶಿಕ್ಷಕ ನಾಗರಾಜ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.ಗಣಪತಿ ಭಟ್ಟ ಉಪಸ್ಥಿತರಿದ್ದರು.ಗಣೇಶ ಹೆಗಡೆ ಸ್ವಾಗತಿಸಿ, ವಂದಿಸಿದರು.ಇದೆ ಸಂದರ್ಭದಲ್ಲಿ ಟ್ರಸ್ಟ್ ನ ವಿದ್ಯಾರ್ಥಿಗಳು ಗುರುನಮನ ಸಲ್ಲಿಸಿದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.
Leave a Comment