ಹೊನ್ನಾವರ; ತಾಲೂಕಿನ ರಾಷ್ಟಿಯ ಹೆದ್ದಾರಿ ೬೬ ರ ಇಡಗುಂಜಿ ಕ್ರಾಸ್ ಸಮೀಪ ಹೆದ್ದಾರಿಯಲ್ಲಿ ಐಆರ್‌ಬಿ ಕಂಪನಿಯ ವತಿಯಿಂದ ಯಾವುದೆ ದಾರಿದೀಪ ಅಳವಡಿಸಿಲ್ಲ ಇಲ್ಲಿ ಕೂಡಲೆ ದಾರಿದೀಪ ಅಳವಡಿಸಬೇಕು ಎಂದು ಕರವೆ ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಅಗ್ರಹಿಸಿದ್ದಾರೆ, ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ,
ಇಡಗುಂಜಿ ದೇವಸ್ಥಾನಕ್ಕೆ ರಾಜ್ಯ ಹಾಗೂ ದೇಶದ ಮೂಲೆಮೂಲೆಯಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ ರಾತ್ರಿ ಸಮಯದಲ್ಲಿ ಹೆದ್ದಾರಿ ಮೂಲಕ ಆಗಮಿಸುವ ಪ್ರವಾಸಿಗರು ಮಾರ್ಗ ಸೂಚಿಲು ಯಾವುದೆ ದಾರಿದೀಪ ಇಲ್ಲವಾಗಿದ್ದು ವಿಪರ್ಯಾಸವೆ ಸರಿಯಾಗಿದೆ.

ಐಆರ್‌ಬಿ ಕಂಪನಿಯ ಕಾಮಗಾರಿ ಹೊನ್ನಾವರ ಪಟ್ಟಣವನ್ನು ಹೊರತುಪಡಿಸಿ ಕಾಮಗಾರಿ ಬಹುತೇಕ ಮುಗಿಸಿದೆ ತಾಲೂಕಿನ ಕಾಸರಕೋಡ ಕೆಳಗಿನೂರ ಗುಣವಂತೆ ಮಂಕಿಮಾವಿನಕಟ್ಟೆ ಮುಂತಾದ ಕಡೆಗಳಲ್ಲಿ ದಾರಿದೀಪ ಅಳವಡಿಸಿ ವರ್ಷಗಳೆ ಕಳೆದಿದೆ.
ಆದರೆ ಪುರಾಣ ಪ್ರಸಿದ್ದ ದೇವಸ್ಥಾನಕ್ಕೆ ಮಾರ್ಗ ಸೂಚಿಸುವ ಇಡಗುಂಜಿ ಕ್ರಾಸ್ ಸಮೀಪ ಯಾವುದೆ ದಾರಿದೀಪ ಅಳವಡಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಡಗುಂಜಿ ದೇವಸ್ಥಾನಕ್ಕೆ ರಾಜ್ಯ ಹಾಗೂ ದೇಶದ ಮೂಲೆ ಮೂಲೆಯಿಂದ ಭಕ್ತರು ಪ್ರವಾಸಿಗರು ಆಗಮಿಸುತ್ತಾರೆ. ಮರುಡೇಶ್ವರ ಕಡೆಯಿಂದ ರಾತ್ರಿ ಸಮಯದಲ್ಲಿ ಆಗಮಿಸುವ ಪ್ರವಾಸಿಗರು ಇಡಗುಂಜಿ ಕ್ರಾಸನಲ್ಲಿ ಯಾವುದೆ ದಾರಿದೀಪ ಇಲ್ಲದೆ ಇರುವುದರಿಂದ ಗುಣವಂತೆಗೆ ಹೋಗಿ ಹಿಂದುರಿಗಿ ಬಂದಿರುವ ಉದಾಹರಣೆಗಳು ಬಹಳಷ್ಟಿದೆ. ಹಾಗೆ ಹೊನ್ನಾವರ ಕಡೆಯಿಂದ ಆಗಮಿಸುವ ಪ್ರವಾಸಿಗರು ಮಂಕಿಮಾವಿನಕಟ್ಟೆಗೆ ಹೋಗಿ ವಾಪಸ ಬರುತ್ತಿದ್ದಾರೆ ಎಂದು ಇಲ್ಲಿನ ಆಟೋ ಚಾಲಕರು ಅಂಗಡಿಕಾರರು ಹೇಳುತ್ತಿದ್ದಾರೆ.



shri devaki krishna wash point, karki naka, honavar ,contact; sachin mesta 9538529046,8310014860
ಇದನ್ನು ಹೊರತುಪಡಿಸಿ ಹೇಳಬೇಕಾದರೆ ಶರಾವತಿ ಎಡದಂಡೆಯ ನಿವಾಸಿಗಳು ಅಂದರೆ ಬಳ್ಕೂರ ಕೊಡಾಣಿ ಮಾಗೋಡ ಸಂಶಿ ಕುದ್ರಗಿ ನಗರಬಸ್ತಿಕೇರಿ ಸೇರಿದಂತೆ ಮುಂತಾದ ಕಡೆಗಳಿಗೆ ತೆರಳುವವರು ಈ ಮಾರ್ಗದ ಮೂಲಕವೇ ಸಾಗಬೇಕು. ಬೇರಡೆಯಿಂದ ಆಗಮಿಸುವ ಸಾರ್ವಜನಿಕರಿಗೆ ದಾರಿದೀಪ ಇಲ್ಲದೆ ತೋಂದರೆ ಅನುಭವಿಸುವಂತಾಗಿದೆ ಎಂದು ಹೇಳಲಾಗುತ್ತಿದೆ.
ಈ ವಿಷಯವನ್ನು ಶಾಸಕ ಸುನೀಲ್ ನಾಯ್ಕ ಅವರ ಗಮನಕ್ಕೆತಂದು ಮನವರಿಕೆ ಮಾಡಲಾಗಿದ್ದರೂ ಕೇವಲ ಭರವಸೆ ಸಿಕ್ಕಿದ್ದು ಬಿಟ್ಟರೆ ಪ್ರಗತಿ ಕಂಡಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಈ ಬಗ್ಗೆ ನಿಲಕ್ಷ ವಹಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಐಆರ್‌ಬಿ ಕಂಪನಿಯೆಂದರೆ ಇಸ್ಟ ಕಂಪನಿಯಂತಾಗಿದೆ ದೇಶದಲ್ಲಿಯೆ ಪ್ರಸಿದ್ದಿ ಪಡೆದಿರುವ ದೇವಸ್ಥಾನದಲ್ಲಿ ಒಂದಾದ ಇಡಗುಂಜಿ ಮಾಹಾಗಣಪತಿ ದೇವಸ್ಥಾಸಕ್ಕೆ ಹೋಗುವ ಇಡಗುಂಜಿ ಕ್ರಾಸ್ ಸಮೀಪ ಯಾವುದೆ ದಾರಿದೀಪದ ವ್ಯವಸ್ಥೆ ಕಲ್ಪಿಸಿಲ್ಲಾ.
ಇದು ಜನಪ್ರತಿನಿಧಿಗಳ ಕಣ್ಣಿಗೆ ಕಾಣುವುದಿಲ್ಲವೇ? ಈ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಹರಕೆಗಳನ್ನು ಒಪ್ಪಿಸುತ್ತಾರೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ ರಾತ್ರಿಸಮಯದಲ್ಲಿ ಮಾರ್ಗ ಸೂಚಿಸಲು ಯಾವುದೆ ದಾರಿದೀಪಗಳು ಇಲ್ಲಾ ಹಲವು ಬಾರಿ ಪ್ರಾಣಿಗಳು ಹಾಗೂ ಮನುಷ್ಯರಿಗೆ ಅಫಘಾತ ಸಂಭವಿಸಿದೆ. ಇದರ ವಿರುದ್ದ ಯಾವ ಜನಪ್ರತಿನಿಧಿಗಳು ದ್ವನಿ ಎತ್ತುತ್ತಿಲ್ಲಾ. ಈ ಸಮಸ್ಯೆ ಹಾಗೆಯೇ ಇದ್ದಲ್ಲಿ ಇಲ್ಲಿನ ರಿಕ್ಷಾ ಚಾಲಕರು ಅಂಗಡಿಕಾರರು ಸಾರ್ವಜಿಕರ ಒಗ್ಗೂಡಿಸಿ ನಮ್ಮ ಸಂಘಟನೆ ಮುಖಾಂತರ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಟೋಚಾಲಕ ಮಾಲಕ ಸಂಘದ ಅಧ್ಯಕ್ಷ ಮಾರುತಿ ನಾಯ್ಕ, ರಾಮ ಗೌಡ, ಮಂಜುನಾಥ ಗೌಡ, ರಾಘವೇಂದ್ರ ಗೌಡ, ತಿಮ್ಮಪ್ಪ ಗೌಡ, ಕೃಷ್ಣ ಗೌಡ ಈಶ್ವರ ನಾಯ್ಕ ಕೇಶವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
? well done