
ಯಲ್ಲಾಪುರ : ಯಲ್ಲಾಪುರ ಅರಣ್ಯ ವಲಯದ, ಮಳಲಗಾಂವ ಶಾಖಾ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯದಲ್ಲಿ ಅಕ್ರಮ ಸಾಗವಾನಿ ಹಾಗೂ ಸೀಸಂ ಕಟ್ಟಿಗೆಯನ್ನು ವಾಹನದಲ್ಲಿ ತುಂಬುತ್ತೀರುವ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.
ತಾಲ್ಲೂಕಿನ ಚಂದಗುಳಿ ಗ್ರಾಮದ ಆಗ್ನೇಲ ಜಾನ ಸಿದ್ಧಿ ಬಂಧಿತ ಆರೋಪಿಯಾಗಿದ್ದು, ಇತನು ಮಾರುತಿ ೮೦೦ ವಾಹನದಲ್ಲಿ ಅಕ್ರಮ ಕಟ್ಟಿಗೆಯನ್ನು ತುಂಬುತ್ತೀರುವ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖಾ ಸಿಬ್ಬಂದಿಗಳು,ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುತ್ತಾರೆ. ಘಟನಾ ಸ್ಥಳದಿಂದ ಸಾಗವಾನಿ, ಸೀಸಂ ಕಟ್ಟಿಗೆಯೊಂದಿಗೆ, ಕಟ್ಟಿಗೆ ಸಾಗಿಸಲು ಬಳಸಲಾದ ಮಾರುತಿ ೮೦೦ ವಾಹನ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನುಳಿದ ೪ ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧಕಾರ್ಯ ನಡೆಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ ಮತ್ತು ವಲಯ ಅರಣ್ಯಾಧಿಕಾರಿ ಬಾಲಸುಬ್ರಮಣ್ಯ ಎಮ್. ಇವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಶೋಕ ಶಿರಗಾಂವಿ, ಶ್ರೀನಿವಾಸ ನಾಯ್ಕ, ಅಲ್ತಾಪ್ ಚೌಕಡಾಕ, ಅಶೋಕ ಹಳ್ಳಿ, ಸಂಜಯಕುಮಾರ ಬೋರಗಲ್ಲಿ, ಸುನೀಲ್ ಜಂಗಮಶೆಟ್ಟಿ, ಬಸಲಿಂಗಪ್ಪ ಬಸಪ್ಪ, ಸಂತೋಷ ಮಾಡಗ್ಯಾಳ ಮತ್ತು ಅರಣ್ಯ ರಕ್ಷಕರಾದ ಮಹಮ್ಮದರಫೀಕ ಕೋರ್ತಿ, ಶಹನವಾಜ್ ಮುಲ್ತಾನಿ ಮುಂತಾದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Leave a Comment