ಯಲ್ಲಾಪುರ : ಕಳೆದ ವರ್ಷ ಮಾರ್ಚನಲ್ಲಿ ತಾಲೂಕಿನ ಹಿತ್ಲಳ್ಳಿಯ ಜಾಗನಮನೆಯಲ್ಲಿ ನಡೆದ ಸರಣಿ ಮನೆಗಳ್ಳತನಕ್ಕೆ ಸಂಬAಧಿಸಿದAತೆ ತಲೆಮರಿಸಿಕೊಂಡಿದ್ದ ಇಬ್ಬರು ಅಂತರ್ರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಮಾರ್ಚ್ನಲ್ಲಿ ಹಿತ್ಲಳ್ಳಿಯ ನಾಗರಾಜ ಗಣೇಶ ಹೆಗಡೆ ಹಾಗೂ ಗೋಪಾಲ ದೇವೇಂದ್ರ ಹೆಗಡೆ ಅವರ ಮನೆಗೆ ರಾತ್ರಿ ವೇಳೆ ನುಗ್ಗಿ ದರೋಡೆ ಮಾಡಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡ ಯಲ್ಲಾಪುರ ಪೊಲೀಸ್ ಠಾಣಾ ಸಿಬ್ಬಂದಿಗಳು ಮಧ್ಯಪ್ರದೇಶದ ಧಾರ ಜಿಲ್ಲೆಯ ಗೋಡದೋಲಿಯಾ ಗ್ರಾಮದ ಠಾಕೂರ್ಸಿಂಗ್ ರತನಸಿಂಗ್ ಮಿನಾಬಾ (೨೬) ಹಾಗೂ ಪ್ರತಾಪಸಿಂಗ್ ರತನಸಿಂಗ್ ಮಿನಾಬಾ (೨೮) ಎಂಬ ಎರಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಎಸ್ಪಿ ಶಿವಪ್ರಕಾಶ ದೇವರಾಜು, ಎಎಸ್ಪಿ ಎಸ್.ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ಸುರೇಶ ಯಳ್ಳೂರು ಅವರ ನೇತ್ರತ್ವದಲ್ಲಿ ಪಿಎಐಗಳಾದ ಮಂಜುನಾಥ ಗೌಡರ್ ಹಾಗೂ ಪ್ರಿಯಾಂಕಾ ಎಂ.ಎನ್. ಹಾಗೂ ಸಿಬ್ಬಂದಿಗಳಾದ ಮಹ್ಮದ್ ಶಫಿ ಬಸವರಾಜ ಹಗರಿ, ಶೇಷಿ ಮರಾಠಿ, ಚನ್ನಕೇಶವ, ನಂದೀಶ್ವರ ಗುಡೋಡಗಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment