ಹೊನ್ನಾವರ ತಾಲೂಕಿನ ಕೆಳಗಿನೂರಿನ ನಾಜಗಾರದ ಸಂತೋಷ ಗೌಡ, ಕೊಂಕಣ ಲೈಲ್ವೇ ಡೈರೆಕ್ಟರ್ ಲೆವೆಲ್ ಅವಾರ್ಡ್ 2021 ಪುರಷ್ಕಾರಕ್ಕೆ ಭಾಜನರಾಗಿದ್ದಾರೆ.

ಸಂತೋಷ ಗೌಡ ನಾಜಗಾರ್ ಇವರು ಕೊಂಕಣ ರೈಲ್ವೆಯಲ್ಲಿ ಪಾಯಿಂಟ್ಸ್ ಮೆನ್ ಉದ್ಯೋಗಿ ಆಗಿದ್ದು, ಕಳೆದ ಒಂದು ತಿಂಗಳ ಹಿಂದೆ ಮಂಗಳೂರಿನ ಮದ್ಯದಲ್ಲಿ “ಚೆಕ್ ರೈಲ್ “ಟ್ರ್ಯಾಕ್ ಕಟ್ ಆಗಿರೋದನ್ನು ನೋಡಿ ತಕ್ಷಣ ರೈಲ್ ತಡೆದು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದರು. ಇದನ್ನು ರೈಲ್ವೆ ಇಲಾಖೆಯ ಮೇಲಧಿಕಾರಿಗಳು ಗಮನಿಸಿದ್ದರು.ಅಂದಿನ ದಿನ ಅವಘಡ ನಡೆದಿದ್ದರೆ ರೈಲ್ವೆ ಇಲಾಖೆಗೆ ಬಹುದೊಡ್ಡ ನಷ್ಟ ಆಗುತ್ತಿತ್ತು. ಈ ಮಹಾ ನಷ್ಟ ತಪ್ಪಿಸಿದ ಸಂತೋಷ ಗೌಡ ಅವರ ಕಾರ್ಯ ಚಾಣಾಕ್ಷತೆಗೆ ಮೆಚ್ಚಿ ರೈಲ್ವೆ ಇಲಾಖೆ “ಡೈರೆಕ್ಟರ್ ಲೆವೆಲ್
ಅವಾರ್ಡ್ 2021″ ನೀಡಿ ಗೌರವಿಸಿದೆ.
ಸಾಮಾನ್ಯ ಬಡ ಕುಟುಂಬದಿಂದ ಬಂದ ಸಂತೋಷ ಗೌಡ ಅವರು ಪ್ರಾಮಾಣಿಕ ಮತ್ತು ಶ್ರಮ ಜೀವಿ.
ವಿಶೇಷ ಎಂದರೆ ಸಂತೋಷ ಗೌಡ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿದ ಎರಡೇ ವರ್ಷದಲ್ಲಿ ಈ ಪ್ರಶಸ್ತಿಗೆ ಭಾಜನರಾದ ಅತ್ಯಂತ ಕಿರಿಯ ವಯಸ್ಸಿನ ಉದ್ಯೋಗಿ ಆಗಿರುವುದು ಇನ್ಮೊಂದು ವಿಷಯವಾಗಿದೆ. ಇವರ ಸಾಧನೆಗೆ ತಾಲೂಕಿನ ಗಣ್ಯರು ಅಭಿನಂದಿಸಿದ್ದಾರೆ



shri devaki krishna wash point karki naka honavar contact; sachin mesta 9538529046,8310014860
Leave a Comment