• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

October 17, 2021 by Jayaraj Govi Leave a Comment

IMG 20211015 WA0415

ಯಲ್ಲಾಪುರ:  ತಾಲೂಕಿನ ಧನಗರ ಗೌಳಿ  ಸಮುದಾಯದವರು  ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ  ಆಚರಿಸುತ್ತಾರೆ.

IMG 20211015 WA0414

ತಾಲೂಕಿನ  ಕಿರವತ್ತಿ ,ಮದನೂರ  ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ,

ಇದರ ವಿಶೇಷತೆ  ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ ಗ್ರಾಮಗಳಿಗೂ ತಾಂಬೂಲ ಕೊಟ್ಟು ತಮ್ಮ ಜನರನ್ನು ಆಮಂತ್ರಿಸುತ್ತಾರೆ.

ಆಮಂತ್ರಣ ಸ್ವೀಕರಿಸಿ ನೂರಾರು ಜನ ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಈ  ಸಮುದಾಯದವರು ಆಚರಿಸುವ ಎಲ್ಲಹಬ್ಬಗಳಲ್ಲಿ ದಸರಾ ಹಬ್ಬವು ಅತಿ ದೊಡ್ಡಹಬ್ಬ .  ಮೂರು ದಿನ ಹಾಲು ಮತ್ತು ಮೊಸರು ಉಪಯೋಗಿಸಿ ಕೊಂಡು ಆಚರಣೆ ಮಾಡುತ್ತಾರೆ.

IMG 20211015 WA0416


ಹಬ್ಬ ಪ್ರಾರಂಭವಾದ ದಿನದಿಂದ ನಮ್ಮ ಜನಾಂಗದ ಜನರು ಬಹಳ ಆಚಾರ ವಿಚಾರ ಶ್ರದ್ಧೆ ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸುತ್ತಾರೆ .ನಮ್ಮವರು ಎಷ್ಟೇ  ವಿದ್ಯಾವಂತರಾದರೂ  ನಮ್ಮ ಪರಂಪರೆಯ   ಶುಭ ಶ್ವೇತ ವರ್ಣದ ನಿಲುವಂಗಿ ಧರಿಸಿ, ತಲೆಗೆಪಾಗೋಟ ,ಕೈಯಲ್ಲಿ ಬೆತ್ತದ ಕೋಲು ,ವಾದ್ಯಗಳೊಂದಿಗೆ  ಸಮುದಾಯದವರು  ಸೇರಿ ಮುರಳಿ ವಾದನ, ಗಜ ನೃತ್ಯ ಮಾಡಿ ಪ್ರತಿಯೊಬ್ಬರ ಮನೆಗೆ ಹೋಗಿ ಆಯುಧ ಪೂಜೆ ಮಾಡುವರು, ಪೂಜೆ ಪಠಣಗಳೊಂದಿಗೆ ಹರಹರ ಚಾಂಗಬಲಾ (ಎಲ್ಲರಿಗೂ ಶುಭವಾಗಲಿ) ಎಂಬ ಘೋಷ ವಾಕ್ಯದೊಂದಿಗೆ ಜಯಕಾರ ಹಾಕುತ್ತಾರೆ.

ಒಂದೇ ತಟ್ಟೆಯಲ್ಲಿ ಒಂದೊAದು ತುತ್ತು  ಸ್ವೀಕಾರ ಮಾಡುವ ಮೂಲಕ ಒಗ್ಗಟ್ಟಿನ ಸಂದೇಶವನ್ನು ಸಾರುತ್ತೇವೆ.ನಂತರ ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಹೇಳುತ್ತೇವೆ .ಹೀಗೆ ಶಿಲ್ಲಂಗಾನದ ಹಲವಾರು ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ  ಹಬ್ಬವನ್ನು ಸಂತಸದಿAದ ಆಚರಿಸುತ್ತೇವೆ ಎಂದು ದನಗರ ಗೌಳಿ ಸಮುದಾಯದ ದೊಂಡು ಪಾಟೀಲ ಹೇಳುತ್ತಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur, ಸಂಸ್ಕೃತಿ-ಕಲೆ

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...