
ಯಲ್ಲಾಪುರ : ಕ್ರೀಡೆಗಳು ಮಾನವನ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ. ಕ್ರಿಡೆಯಲ್ಲಿ ಸೋಲು ಗೆಲುವು ಎಲ್ಲವೂ ಸಹಜ. ಸೋಲನ್ನೇ ನಾವು ನಮ್ಮ ಗೆಲುವಿನ ದಾರಿಗೆ ಮೆಟ್ಟಲನ್ನಾಗಿಸಿಕೊಳ್ಳಬೇಕು ಎಂದು ಒಲಂಪಿಕ್ ಬಂಗಾರ ಪದಕ ವಿಜೇತ ನೀರಜ್ ಛೋಪ್ರಾ ಗೆ ತರಬೇತಿ ನೀಡಿದ, ಯೋಧ ಕಾಶಿನಾಥ ನಾಯ್ಕ ಹೇಳಿದರು
.
ಪಟ್ಟಣದ ಶಾರದಾಗಲ್ಲಿಯ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಸಂಘ ಹಾಗೂ ಗ್ಲೋಬಲ್ ನಾಮಧಾರಿ ಫೋರಂ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಗೌರವ ಸಮರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇಶಕ್ಕಾಗಿ ೨೨ ವರ್ಷಗಳಿಂದ ಸೇವೆ ಸಲ್ಲಿಸಿರುತ್ತನೆ. ಮುಂದೆ ಯಾವುದೇ ದೊಡ್ಡ ಹುದ್ದೆಗಳಿಗೆ ನಾನು ಆಕಾಂಕ್ಷಿಯಾಗಿಲ್ಲ, ಬದಲಾಗಿ ನಮ್ಮ ಉತ್ತರಕನ್ನಡ ಭಾಗದಲ್ಲಿ ಒಂದು ಕ್ರೀಡಾ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ನಮ್ಮ ಪ್ರದೇಶದ ಕ್ರೀಡಾಪಟುಗಳು ಸಹ ದೇಶ ವಿದೇಶದ ಮಟ್ಟದಲ್ಲಿ ಬೆಳಗುವಂತೆ ತರಬೇತಿ ನೀಡಬೇಕೆಂಬ ಬೃಹದಾಸೆ ಇದೆ. ಈಗಲೂ ಸಹ ಕೆಲ ಕ್ರೀಡಾಪಟುಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡುತ್ತಿದ್ದೇನೆ. ನೀರಜ್ ಛೋಪ್ರಾ ನಂತೆ ಇನ್ನೂ ಹಲವು ಕ್ರೀಡಾಪಟುಗಳು ಬೆಳೆಯಲು ನಾನು ಸಹಕಾರಿಯಾಗಬೇಕೆಂಬುದೇ ನನ್ನ ಬಯಕೆಯಾಗಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಗ್ಲೋಬಲ್ ನಾಮಧಾರಿ ಫೋರಂ ಸದಸ್ಯ ಉದಯ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜದಲ್ಲೂ ಎಲ್ಲ ವಿಭಾಗದಲ್ಲಿ ಮಿಂಚುವAತಹ ಪ್ರತಿಭೆಗಳಿವೆ. ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ತೆರೆಮರೆಯಲ್ಲಿ ಅವಿತಿರುವಂತಾಗಿದೆ. ಅಂತವರನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ನಮ್ಮೆಲ್ಲರಿಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ವಹಿಸಿದ್ದರು. ಗುರು ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ಕೆ.ಕೆ. ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಸಮಾಜದ ಪ್ರಮುಖರಾದ ಎಮ್.ಎಸ್. ನಾಯ್ಕ ಮಂಚೀಕೇರಿ, ಟಿ.ಕೆ ನಾಯ್ಕ, ಬಾಲಕೃಷ್ಣ ನಾಯ್ಕ ಮುಂತಾದವರು ವೇದಿಕೆಯಲ್ಲಿದ್ದರು. ಶಿಕ್ಷಕರಾದ ಆರ್.ಐ. ನಾಯ್ಕ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮವನ್ನು, ಶಿಕ್ಷಕ ಚಂದ್ರಹಾಸ ನಾಯ್ಕ ಸ್ವಾಗತಿಸಿದರು. ಸಂತೋಷ ನಾಯ್ಕ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಾದ, ಪದವಿ ಪೂರ್ವದಲ್ಲಿ ಉತ್ತಮ ಅಂಕ ಪಡೆದ ಹೊನ್ನಾವರದ ವಿವೇಕಾನಂದ ಮಾರುತಿ ನಾಯ್ಕ, ಭೌತ ಶಾಸ್ತçದಲ್ಲಿ ಡಾಕ್ಟರೇಟ್ ಪದವಿ ಪಡೆದ ಕುಮಟಾದ ಅಶ್ವಿನಿ ನಾಯ್ಕ, ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ಸಹನಾ ಚಂದ್ರಹಾಸ ನಾಯ್ಕ, ಅನನ್ಯ ಅರುಣ ನಾಯ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Leave a Comment