
ಯಲ್ಲಾಪುರ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ೧೦ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ ಘಟನೆ ಪಟ್ಟಣದ ರಾ.ಹೆ. ೬೩ರ ಜೋಡಕೆರೆ ಬಳಿ ರವಿವಾರ ಸಂಜೆ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಂದಾಜು ೬ ಲಕ್ಷ ಮೌಲ್ಯದ ೧೦ ಸುರ್ತಿ ತಳಿಯ ಎಮ್ಮೆಗಳನ್ನು ಪೊಲೀಸರು ರಕ್ಷಿಸಿ, ೩ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟçದ ಅಹಮ್ಮದನಗರ ಜಿಲ್ಲೆಯ ಉಜೇಫ್ ರಾಜು ಮನ್ಸೂರಿ (೨೩), ವಾಸಿಂ ಮಹಮ್ಮದ ಶೇಖ (೩೬), ರಜಾಕ ಇದ್ದು ಶೇಖ (೨೪) ಬಂಧಿತ ಆರೋಪಿಗಳಾಗಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗಿದೆ.
Leave a Comment