ಹೊನ್ನಾವರ; ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಮಿನಿ ಬಸ್ ಗೇರುಸೊಪ್ಪಾ ಬಂಗಾರಕುಸುಮಾ ಪಾಲ್ಸಬಳಿ ಪಲ್ಟಿಯಾಗಿದ್ದು, ಪ್ರವಾಸಿಗರು ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಚಾಮರಾಜನಗರದಿಂದ ಮುರ್ಡೆಶ್ವರಕ್ಕೆ ಆಗಮಿಸುತ್ತಿದ್ದ ಮಿನಿ ಬಸ್ ಬಂಗಾರಕುಸುಮ ಪಾಲ್ಸ ಸಮೀಪದ ತಿರುವಿನಲ್ಲಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ೧೬ ಜನ ಪ್ರವಾಸಿಗರಲ್ಲಿ ೭ ಜನರಿಗೆ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುವನ್ನು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಭದ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



shri devaki krishna wash point karki naka honavar contact; sachin mesta 9538529046,8310014860
Leave a Comment