
ಯಲ್ಲಾಪುರ: ಪ್ರತಿವರ್ಷದಂತೆ ಈ ಬಾರಿಯೂ ೩೫ ನೇ ವರ್ಷದ ಸಂಕಲ್ಪ ಉತ್ಸವವನ್ನು ನ.೬ ರಿಂದ ೮ ರವೆರೆಗೆ ಹಾಗೂ ನ.೯ ರಿಂದ ೧೧ರ ವರೆಗೆ ಎರಡು ಹಂತಗಳಲ್ಲಿ ಯಲ್ಲಾಪುರ ಹಾಗೂ ತಾಲೂಕಿನ ನಂದೊಳ್ಳಿ ಸೇರಿದಂತೆ ವಿವಿಧೆಡೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. ಅವರು ತಮ್ಮ ಕಾರ್ಯಾಲಯದಲ್ಲಿ ಸಂಕಲ್ಪ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೩ ದಿನಗಳ ಯಕ್ಷಗಾನ ಕಾರ್ಯಕ್ರಮ ಪಟ್ಟಣದ ಗಾಂಧೀ ಕುಟೀರದಲ್ಲಿ ಆಯೋಜಿಸಲಾಗಿದ್ದು, ಎರಡನೇ ಹಂತವನ್ನು ನಂದೊಳ್ಳಿಯಲ್ಲಿ ನಡೆಯಲಿದೆ.ನ.೬ರಂದು ಸಂಜೆ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲಕುಮಾರ ಕಾರ್ಕಳ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.ಮದ್ಯಾಹ್ನ ೩ಗಂಟೆಗೆ ಕವಿಯಿತ್ರಿ ಶಿವಲೀಲಾ ಹುಣಸಗಿ ಸಂಚಾಲಕತ್ವದಲ್ಲಿ ಕವಿಗೋಷ್ಠೀ ನಡೆಯಲಿದೆ.ಸಂಜೆ ೭.೩೦ಕ್ಕೆ ಲವ ಕುಶ ಯಕ್ಷಗಾನನಡೆಯಲಿದೆ.ನ.೮ರಂದು ಗ್ರಾಮಸ್ವರಾಜ್ ಮತ್ತು ಪಂಚಾಯತರಾಜ್ ಹಾಗೂ ಮಕ್ಕಳ ಮಹಿಳಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರೊಂದಿಗೆ ಸಂವಾದ ಹಾಗೂ ಈ ಕುರಿತು ತಾಲೂಕಿನ ವಿವಿಧೆಡೆ ವಿಚಾರ ಸಂಕಿರಣ ನಡೆಯಲಿದೆ. ಯು.ಕೆ ಸೌಹಾರ್ಧ ಸಹಕಾರಿ ಮಹಿಳಾ ಶಾಖೆ ಉದ್ಘಾಟಗೊಳ್ಳಲಿದೆ.ಹಾಡು ಹೇಳುವ ,ಭರತನಾಟ್ಯ,ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನ.೮ರಂದು ಸಮಾರೋಪ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀಮಧ್ ಗಂಗಾಧರೇAದ್ರ ಸ್ವಾಮೀಜಿ ಸಾನಿಧ್ಯವಹಿಸುವರು.ಸಂಜೆ ಮಾಗಧವಧೆ ಯಕ್ಷಗಾನ ನಡೆಯಲಿದೆ.
ಸಂಕಲ್ಪ ಉತ್ಸವದ ಎರಡನೆ ಹಂತವಾಗಿ ನ.೯ರಿಂದ ತಾಲೂಕಿನ ವಿವಿಧೆಡೆ ೩ ದಿನ ತಾಳಮದ್ದಳೆ, ೨೧ ರಂದು ಖ್ಯಾತ ಕಲಾವಿದರಿಂದ ಹಿಮ್ಮೇಳ ವೈಭವ ನಡೆಯಲಿದೆ. ೮ ದಿನ ನಡೆಯುವ ಉvವÀ್ಸದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಶ್ವೇಶ್ವರ ಹೆಗಡೆ ಕಾಗೇರಿ,ವಿಪಸದಸ್ಯ ಶಾಂತರಾಮ ಸಿದ್ದಿ,ಮಾಜಿ ಸಚಿವ ,ಶಾಸಕ ಆರ್ .ವಿ ದೇಶಪಾಂಡೆ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೋಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಚಾಲಕ ಪ್ರಸಾದ ಹೆಗಡೆ, ಗೋಪಾಲಕೃಷ್ಣ ಭಟ್ಟ, ಎನ್.ಎಸ್.ಭಟ್ ನಂದೊಳ್ಳಿ, ಸಿ.ಜಿ.ಹೆಗಡೆ, ಬಾಬು ಬಾಂದೇಕರ, ಪ್ರದೀಪ ಯಲ್ಲಾಪುರಕರ ಇದ್ದರು.
Leave a Comment