ಯಲ್ಲಾಪುರ :ಸಮಾಜ ಸೇವೆ ಹಾಗೂ ವಿವಿಧ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಸರಕಾರವು ಕೊಡಮಾಡುವ ” ಮಹರ್ಷಿ ವಾಲ್ಮೀಕಿ ಪ್ರಶಸ್ತಿ ” ಗೆ ತಾಲೂಕಿನ ಮಾಗೋಡ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಲಕ್ಷ್ಮಿ ಸಿದ್ದಿ ಆಯ್ಕೆಯಾಗಿದ್ದಾರೆ.

ಬಡುಕಟ್ಟು ಸಿದ್ದಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ ವಾಹನ ಹೋಗುವುದು ಅಸಾಧ್ಯವಾಗಿತ್ತು. ಲಕ್ಷ್ಮಿಗಣಪತಿ ಸಿದ್ದಿ ಸಿದ್ದಿರವರು ಕಳದೆ 35 ವರ್ಷಗಳಿಂದ ನಾಟಿ ವೈದ್ಯೆಯಾಗಿ ಯಾವುದೇ ಫಲಾಪೇಕ್ಷ ಇಲ್ಲದೆ ಯಶಸ್ವಿಯಾಗಿ 300 ಕ್ಕಿಂತ ಹೆಚ್ಚು ಹೆರಿಗೆಯನ್ನು ಮಾಡಿಸಿದ್ದಾರೆ.ಅವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಇಂದು ” ಮಹರ್ಷಿ ವಾಲ್ಮೀಕಿ ಪ್ರಶಸ್ತಿ ” ಗೆ ಭಾಜನರಾಗಿದ್ದಾರೆ.
Leave a Comment