ಭಟ್ಕಳ: ಅ.24 ರಂದು ಕಾರವಾರದಲ್ಲಿ ನಡೆಯಲಿರುವ ಪೋಲಿಸ ಕಾನ್ಸ್ಟೆಬಲ್ ನೇಮಕಾತಿಗೆ ಭಟ್ಕಳದಿಂದ ತೆರಳುವ ಉದ್ಯೋಗಾಕಾಂಕ್ಷಿಗಳಿಗೆ ಶಾಸಕ ಸುನೀಲ ನಾಯ್ಕ ಮುಂಜಾನೆ ಕಾರವಾರಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ .

ಕರ್ನಾಟಕ ರಾಜ್ಯದಲ್ಲಿ ಕೆ.ಎಸ್.ಪಿ ವತಿಯಿಂದ 4 ಸಾವಿರ ಪೊಲೀಸ ಕಾನ್ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು. ಈ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಭಟ್ಕಳ ಕೆ.ಎಸ್.ಆರ್.ಟಿ.ಸಿ. ಡಿಪ್ಪೋ ವ್ಯವಸ್ಥಾಪಕರೊಂದಿಗೆ ಮಾತುಕಥೆ ನಡೆಸಿ. ಭಟ್ಕಳದಿಂದ ಎಷ್ಟೇ ಉದ್ಯೋಗಾಕಾಂಕ್ಷಿಗಳು ತೆರಳಿದರು ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಅ.24ರ ಬೆಳಿಗ್ಗೆ 5.30ಕ್ಕೆ ಭಟ್ಕಳದ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ.
ಈ ವಿಶೇಷ ಬಸ್ ಕೇವಲ ಉದ್ಯೋಗಾಕಾಂಕ್ಷಿಗಳು ಕಾರವಾರಕ್ಕೆ ಪರೀಕ್ಷೆ ಬರೆಯಲು ತೆರಳುವವರಿಗೆ ಮಾತ್ರ ಕಲ್ಪಿಸಲಾಗಿದೆ. ಇಂದಿನಿಂದಲೇ ಉದ್ಯೋಗಾಕಾಂಕ್ಷಿಗಳು ಭಟ್ಕಳದಿಂದ ತೆರಳುವರು ಬಸ್ ಬುಕ್ ಮಾಡಿದರೆ ಎಷ್ಟು ಬಸ್ಸಗಳ ವ್ಯವಸ್ಥೆ ಮಾಡಬಹುದು ಎಂದು ಅಂದಾಜು ಸಿಗಲಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಆದಷ್ಟು ಬೇಗನೆ ಬಸ್ ಬುಕ್ ಮಾಡಲು ಕೋರಲಾಗಿದೆ. ಮತ್ತು ಬಸ್ ನಲ್ಲಿ ತೆರಳು ಪರೀಕ್ಷೆ ಹಾಲ್ ಟಿಕೆಟ್ ತೋರಿಸಿ ತೆರಳಬಹುದಾಗಿದೆ.
shri devaki krishna wash point karki naka honavar contact; sachin mesta 9538529046,8310014860
shri devaki krishna wash point karki naka honavar contact; sachin mesta 9538529046,8310014860
Leave a Comment