ಹೊನ್ನಾವರ : ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕರೆಮನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರ, ಗುಣವಂತೆ ವತಿಯಿಂದ 2021-22ನೇ ಸಾಲಿನ ಯಕ್ಷಗಾನ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ 5ನೇ ತರಗತಿ ಅಥವಾ ಕನ್ನಡ ಓದಲು ಬರೆಯುವ ತಿಳಿದಿರಬೇಕು. ಅನುಭವ, ಆಸಕ್ತಿ ವಯಸ್ಸು, ಸ್ಪಷ್ಟವಾದ ವಿಳಾಸದೊಂದಿಗೆ ಅರ್ಜಿಯನ್ನು ಕೆರೆಮನೆ ಶಿವಾನಂದ ಹೆಗಡೆ ನಿರ್ದೇಶಕ, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಅಂಚೆ : ಗುಣವಂತೆ, ತಾ : ಹೊನ್ನಾವರ, ಉ.ಕ. -581 384 ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಶಿಕ್ಷಣವನ್ನು ಹಾಗೂ ವಿದ್ಯಾರ್ಥಿಗಳ ಹೊರತಾಗಿ ಅನ್ಯ ಯಕ್ಷಗಾನಾಸಕ್ತರಿಗೆ ಕೂಡ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಮತ್ತು ರಜಾದಿನಗಳಲ್ಲಿ ತರಬೇತಿ ಪಡೆಯಬಹುದು.
ಸುತ್ತಮುತತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೂಡಾ ಯಕ್ಷಗಾನ ಶಿಕ್ಷಣ ನೀಡಲಾಗುವುದು. ನವೆಂಬರ್ 18 ರಿಂದ ಯಕ್ಷಗಾನ ತರಗತಿ ಆರಂಭವಾಗಲಿದೆ. ಆಸಕ್ತರು ಮತ್ತು ಹೆಚ್ಚಿನ ಮಾಹಿತಿಗೆ ಮೊ. ಸಂ 9483617988, 9448189140 ಸಂಪರ್ಕಿಸಬಹುದು.
Leave a Comment