ಹೊನ್ನಾವರ : ನಗರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯ ಅಂಗವಾಗಿ ವೈದ್ಯಕೀಯ ಪರೀಕ್ಷೆ, ಸಲಹೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ 23 ರಿಂದ ನವೆಂಬರ್ 1ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮುಂಜಾನೆ 10.30 ರಿಂದ 1ಗಂಟೆ ಮತ್ತು 4.30 ರಿಂದ 6.30ರ ವರೆಗೆ ಸ್ತ್ರೀರೋಗ ತಜ್ಞೆ ಸಬೋರಾ ಬಿವಿ ಇವರು ತಪಾಸಣೆ ನಡೆಸುವರು. ಹೆಸರಾಂತ ಕ್ಯಾನ್ಸರ್ ತಜ್ಞ ಡಾ. ವಿಶ್ವಾಸ ಪೈ 23ರಂದು ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಡುವರು ಮತ್ತು 13-11-2021ರಂದು ಒಂದು ದಿನ ಉಚಿತ ಕ್ಯಾನ್ಸರ್ ತಪಾಸಣೆ ನಡೆಸುವರು. ಆಸ್ಪತ್ರೆಯ ಪೆಥೋಲೊಜಿಸ್ಟ್ ಡಾ. ಮಂಜುಳಾ ಉಚಿತವಾಗಿ ಸೂಜಿ ಬಯಾಪ್ಸಿ ಮಾಡುವರು ಮತ್ತು ಶೇ.50ರ ರಿಯಾಯತಿಯಲ್ಲಿ ಸ್ಕ್ಯಾನಿಂಗ್ ಮಾಡುವರು.
ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿದಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ವಿವರಗಳಿಗಾಗಿ ಸಿ.ತನುಜಾ 8971380286, ಸಿ.ಆಶಾ 7259962309 ಸಂಪರ್ಕಿಸಬಹುದು. ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ಆಸ್ಪತ್ರೆಯ ನಿರ್ದೆಶಕಿ ರೇ.ಸಿ. ಮಾರಿಯಾ ಗೊರಟ್ಟಿ ಪ್ರಕಟಿಸಿದ್ದಾರೆ.
Leave a Comment