ಹೊನ್ನಾವರ; ಹಣವಿಲ್ಲದೆಯೇ ಸೈಬೀರಿಯಾಕ್ಕೆ ಕಾಲ್ನಡಿಗೆಯಲ್ಲೇ ದೇಶ ಸುತ್ತುತ್ತಿರುವ ನಾಗ್ಪುರದ ಯುವಕನಿಗೆ ಹೊನ್ನಾವರದಲ್ಲಿ ವಿವಿದ ಸಂಘಟನೆಗಳಿಂದ ಅಭಿನಂದನೆ ಸಲ್ಲಿಸಿ ಬಿಳ್ಕೊಟ್ಟರು. ಹಲವು ಹವ್ಯಾಸ, ಸಾಧನೆ ಮಾಡುವ ಜನರನ್ನು ನಾವು ಕಾಣುತ್ತೇವೆ.ಕಳೆದ ಒಂದು ವರ್ಷದಿಂದ ಭಾರತವನ್ನು ಸುತ್ತಿ ನಡೆದುಕೊಂಡೆ ಸೈಬೀರಿಯಾದಲ್ಲಿರುವ ಭೂಮಿಯ ಅತ್ಯಂತ ಶೀತ ವಲಯ ಪ್ರದೇಶ ಒಯ್‌ಮ್ಯಾಕೋನ್ ಪ್ರದೇಶಕ್ಕೆ ಭೇಟಿ ನೀಡಲು ತಿರ್ಮಾನಿಸಿದ್ದಾನೆ.ಮಂಗಳವಾರ ತಡ ರಾತ್ರಿ ತಾಲೂಕಿಗೆ ಆಗಮಿಸದ ಯುವಕನ್ನು ಲಯನ್ಸ ಕ್ಲಬ್ ಪದಾದಿಕಾರಿಗಳು ಸ್ವಾಗತಿಸಿ ಸನ್ಮಾನಿಸ ಗೌರವಿಸಿದರು. ಖಾಸಗಿ ಹೋಟೇಲನಲ್ಲಿ ವಾಸ್ಥವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು.
ಬುಧವಾರ ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಕನ್ನಡದ ಶಾಲನ್ನು ಹಾಕಿ ಗೌರವಿಸಿ ಕಿರುಕಾಣಿಕೆ ನೀಡಿದರು. ರೋಟರಿಕ್ಲಬ್ ಅಧ್ಯಕ್ಷ ಸ್ಟಿಪನ್ ರೋಡ್ರಗೀಸ್ ಹಾಗೂ ಪಧಾದಿರಿಗಳು ಸಿ.ಪಿಐ ಶ್ರೀಧರ ಎಸ್. ಆರ್ ಗುಲಾಬಿ ಹೂ ನೀಡುವ ಮೂಲಕ ಶುಭಕೋರಿದರು.ಗೇರುಸೋಪ್ಪಾ ಸರ್ಕಲ್ ಸಮೀಪ ಕರುನಾಡ ವಿಜಯ ಸೇನೆಯ ಪದಾದಿಕಾರಿಗಳು ಸನ್ಮಾನಿಸಿದರು. ರೋಹನ್ ಅಗರ್ವಾಲ್ (೧೯) ಮೂಲತಃ ಮಹಾರಾಷ್ಟ್ರ ನಾಗ್ಪರದವರಾಗಿದ್ದು ೨೦೨೦ರ ಆ.೨೫ರಂದು ಮನೆ ಬಿಟ್ಟು, ವಾರಾಣಸಿಯ ಪವಿತ್ರ ನಗರದಿಂದ ಯಾತ್ರೆ ಹೊರಟಿದ್ದು, ೧೪ ತಿಂಗಳಲ್ಲಿ ರಾಜಸ್ತಾನ, ಹರಿಯಾಣ, ದಿಲ್ಲಿ, ಉತ್ತರಖಂಡ, ಹಿಮಾಚಲ ಪ್ರದೇಶ , ಚಂಡೀಗಡ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ, ಕರ್ನಾಟಕವನ್ನು ಕಾಲ್ನಡಿಗೆಯಲ್ಲೇ ಸಂಚರಿ ಸಿದ್ದಾನೆ.

ಸೈಬೀರಿಯಾ ಹೋಗುವ ಯೋಚನೆ ನನ್ನದು. ಆದರೆ ಯಾವುದೇ ಯೋಜನೆ ನನ್ನಲ್ಲಿಲ್ಲ, ಪ್ರತಿದಿನ ೨೦-೩೦ ಕಿ.ಮೀ. ಪ ನಡೆದುಕೊಂಡು ಹೋಗುವುದೇ ನನ್ನ ಜೀವನ. ಕೈ ತೋರಿಸಿ ವಾಹನದಲ್ಲಿ ೫೦-೧೦೦ ಕಿ.ಮೀ. ಕ್ರಮಿಸುತ್ತೇನೆ. ಸೈಬೀರಿಯಾ ತಲುಪಲು ೮-೧೦ ವರ್ಷಗಳೇ ಬೇಕಾಗಬಹುದು. ಆದರೆ, ನಡೆದುಕೊಂಡೇ ಹೋಗಿ ಗುರಿ ತಲುಪುತ್ತೇನೆ ಎನ್ನುವ ಆತ್ಮವಿಶ್ವಾಸದ ವ್ಯಕ್ತಪಡಿಸಿದರು.
ರಸ್ತೆಗಳೇ ನನ್ನ ವಿಶ್ವವಿದ್ಯಾಲಯ ಜನ ಮತ್ತು ಪರಿಸರವೇ ನನ್ನ ಗುರುಗಳು. ಅವರಿಂದ ಪ್ರತಿದಿನ ಹೊಸ ವಿಷಯ ಕಲಿಯುತ್ತಿದ್ದೇನೆ. ಮೊದಲು ಇಂಗ್ಲಿಷ್, ಹಿಂದಿ, ಮರಾಠಿ ಮಾತ್ರ ಗೊತ್ತಿತ್ತು. ಈಗ ರಾಜಸ್ತಾನಿ, ಪಂಜಾಬಿ, ಮಲೆಯಾಳಿ, ಉತ್ತರಖಂಡಿಯನ್ನೂ ಅರ್ಥ ಮಾಡಬಲ್ಲೆ, ಸೈಬೀರಿಯಾ ತಲುಪುವುದು ನನ್ನ ಗುರಿ. ಎಷ್ಟು ವರ್ಷ ತಗಲುತ್ತದೆ. ಎಂಬುದು ಗೊತ್ತಿಲ್ಲ. ತಲುಪುತ್ತೇನೆ ಎಂದು ಹೇಳುತ್ತಾನೆ.
ಈ ಸಂದರ್ಭದಲ್ಲಿ ಲಯನ್ಸ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆ, ಕಾರ್ಯದರ್ಶಿ ಉದಯ ನಾಯ್ಕ, ಎಂ.ಜಿ.ನಾಯ್ಕ, ಕರುನಾಡ ವಿಜಯ ಸೇನೆಯ ವಿನೋಧ ನಾಯ್ಕ ರಾಯಲಕೇರಿ, ವಿನಾಯಕ ಆಚಾರಿ ಶ್ರೀರಾಮ ಜಾದುಗಾರ್ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
shri devaki krishna wash point karki naka honavar contact; sachin mesta 9538529046,8310014860
Leave a Comment