
ಯಲ್ಲಾಪುರ: , ಭೂಮಿ ಹಾಗೂ ಗೋವು ನಮಗೆಲ್ಲ ತಾಯಿ ಇದ್ದಂತೆ. sಭೂಮಿಗೆ ಅವೈಜ್ಞಾನಿಕ ರಾಸಾಯನಿಕ ಬಳಕೆ ಹಾಗೂ ಗೋಮಾತೆ ಗೂ ಕಲುಷಿತ ಆಹಾರದಿಂದ ಸತ್ವರಹಿತ ಹಾಲು ನೀಡುತ್ತಿದ್ದು ,ಮುಂದಿನದಿನಗಳಲ್ಲಿ ದುಸ್ಥಿತಿ ಎದುರಾಗಲಿದೆ. ಅದಕ್ಕೂ ಪೂರ್ವವೇ ನಾವು ಎಚ್ಚೆತ್ತುಕೊಂಡು ದೇಶಿ ತಳಿಯ ಗೋವುಗಳನ್ನು ಪೋಷಿಸುವುದು ,ಸಾವಯವ ಪದ್ಧತಿಯ ಕೃಷಿಯನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ವಿವಿಧ ರೈತ ಮತ್ತು ಸಂಘಪರಿವಾರದ ಸಂಘಟನೆಗಳ ಸಹಯೋಗದಲ್ಲಿ ತಾಲೂಕಿನ ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಆವಾರದಲ್ಲಿ ಆಯೋಜನೆಗೊಂಡಿದ್ದ ಭೂಮಿ ಸುಪೋಷಣೆ ಹಾಗೂ ಸಂರಕ್ಷಣೆ ತಾಲೂಕಾ ಅಭಿಯಾ£ಕ್ಕೆ.ಚಾಲನೆ ನೀಡಿ ಮಾತನಾಡಿ
ಭೂಮಿ ತನ್ನ ಸತ್ವ ಕಳೆದುಕೊಂಡು ಮುಂದಿನ ಪೀಳಿಗೆಗೆ ಬಂಜರಾಗದAತೆ ಎಚ್ಚರವಹಿಸಬೇಕು. . ಈ ದಿಶೆಯಲ್ಲಿ ಮಠದ ಅಶ್ರಯದಲ್ಲಿ ಯಾವ ಫಲಾಪೇಕ್ಷೆ ಯನ್ನಿಟ್ಟುಕೊಳ್ಳದೇ ಕರಡೊಳ್ಳಿಯಲ್ಲಿ ಗೋಶಾಲೆಯನ್ನು ಆರಂಭಿಸಲಾಗಿದೆ. ಹೈನುಗಾರಿಕೆಯೇ ಪ್ರಧಾನವಾಗಿರದೇ ಅಕ್ರಮವಾಗಿ ಗೋವು ಸಾಗಾಟವಾಗುವನ್ನು ತಪ್ಪಿಸಿ ಅವುಗಳು ಕಟುಕರ ಕೈಗೆ ಹೋಗದಂತೆ ರಕ್ಷಣೆ ಮಾಡುವದಾಗಿದೆ.ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಕೇವಲ ರೈತರಿಗೆ ಅಷ್ಟೇ ಭೂಮಿ ,ಗೋವಿನ ಸಂರಕ್ಷಣೆ ಸಂಬAಧ ಪಟ್ಟಿದ್ದಲ್ಲ ಈ ಕುರಿತು ನಗರವಾಸಿಗಳು ಜಾಗೃತರಾಗಬೇಕು. ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಮೃತ್ತಿಕಾ ಪೂಜನ ಮತ್ತು ಗೋಪೂಜೆಯನ್ನು ನೆರವೇರಿಸಿದರು.
ಗೋವರ್ಧನ ಗೋಶಾಲೆಯ ಎಂ.ಎನ್.ಭಟ್ ಕವಾಳೆ, ರಾಮಕೃಷ್ಣ ಭಟ್ಟ ಕವಾಳೆ,ಕಾರ್ಯದರ್ಶಿ ಗಣಪತಿ ಕೋಲಿಬೇಣ,ದತ್ತಾತ್ರಯ ಕೋಲಿಬೇಣ ,ವಿನಾಯಕ ಕವಾಳೆ,ಹಾಗೂ ಅಭಿಯಾನ ಸಮಿತಿಯ ಸಂಚಾಲಕ ರಾಮಕೃಷ್ಣ ಕವಡಿಕೆರೆ, ಕಿಸಾನ್ ಕಾರ್ಯದರ್ಶಿ ಗೋಪಾಲಕೃಷ್ಣ ರಾ.ಭಟ್,ಪ್ರಮುಖರಾದ ಅನಂತ ಕಂಚಿಪಾಲ್,ರಾಮಚAದ್ರ ಚಿಕ್ಯಾನಮನೆ,,ನರಸಿಂಹ ಸಾತೊಡ್ಡಿ,ಗಣಪತಿ ಬೋಳಗುಡ್ಡೆ,ದೇಮಣ್ಣ,ಸಿದ್ದಾರ್ಥ ನಂದೊಳ್ಳಿಮಠ,ಟಿ.ಎನ್.ಭಟ್ಟ ನಡಿಗೆಮನೆ,ಇದ್ದರು.
ಭೂಸುಪೋಷಣೆ ಮತ್ತು ಸಂರಕ್ಷಣಾಸಮಿತಿಯ ಪ್ರಾಂತ ಸಂಚಾಲಕ ಗಣಪತಿ ಮೆಣಸುಮನೆ ಸ್ವಾಗತಿಸಿ ಪ್ರಾಸ್ತಾವಿಕಗೈದು ಅಭಿಯಾನದ ಉದ್ದೇಶಗಳನ್ನು ತಿಳಿಸಿದರು.ತಾಲೂಕಾ ಸಂಚಾಲಕ ವೆಂಕಟ್ರಮಣ ಬೆಳ್ಳಿ ನಿರ್ವಹಿಸಿದರು.ಅಭಿಯಾನದ ಸಂಚಾಲಕ ಕುಮಾರ ಭಟ್ಟ ಹಂಡ್ರಮನೆ ವಂದಿಸಿದರು.
Leave a Comment